ಉದಯವಾಹಿನಿ, ಸೂರತ್: ದೇಶದ ಹಲವು ನಗರಗಳು ಕೊಳಗೇರಿ ಮುಕ್ತವಾಗಲು ಒದ್ದಾಡುತ್ತಿರುವ ಮಧ್ಯೆಯೇ ಈಗ ಒಂದು ಶುಭ ಸುದ್ದಿ ಗುಜರಾತ್ ನಿಂದ ಸಿಕ್ಕಿದೆ. ದೇಶದ ದೇಶದ ವಜ್ರ ರಾಜಧಾನಿ ಎಂದೇ ಖ್ಯಾತಿ ಪಡೆದ ಸೂರತ್ ದೇಶದ ಮೊದಲ ಕೊಳೆಗೇರಿ ಮುಕ್ತ ನಗರ ವಲಯವಾಗಿ ಗುರುತಿಸಲ್ಪಡಲಿದ್ದು, ಈ ಮೂಲಕ ಇತಿಹಾಸ ಬರೆಯಲು ಸಜ್ಜಾಗಿದೆ. ಸ್ವಚ್ಛತಾ ದಾಖಲೆ ಮತ್ತು ತ್ವರಿತ ಆರ್ಥಿಕ ಬೆಳವಣಿಗೆಗೆ ಹೆಸರುವಾಸಿಯಾದ ಸೂರತ್ ನಲ್ಲಿ ಇದೀಗ ಪ್ರತಿಯೊಬ್ಬ ಕೊಳಗೇರಿ ನಿವಾಸಿಗೂ ಮನೆ ನಿರ್ಮಿಸಿಕೊಡಲಾಗಿದ್ದು, ಕೊಳೆಗೇರಿ ಮುಕ್ತ ವಲಯವಾಗುವ ಕೊನೆಯ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೂರತ್ ಕೊಳೆಗೇರಿಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಕೊನೆಯ ಹಂತದಲ್ಲಿದೆ. ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು ರಾಜ್ಯ ವಸತಿ ನೀತಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ವಸತಿ ಬ್ಲಾಕ್‌ಗಳಾಗಿ ಮಾಡಿದೆ. ಇದರಿಂದ ಕೊಳೆಗೇರಿಯಲ್ಲಿ ವಾಸಿಸುವ ಪ್ರತಿಯೊಬ್ಬ ನಿವಾಸಿಗೂ ವಸತಿ ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೂರತ್ ಅನ್ನು ಕೊಳೆಗೇರಿ ಮುಕ್ತ ವಲಯವಾಗಿ ಬೃಹತ್ ವಿಸ್ತೀರ್ಣದ ಸ್ಥಳವನ್ನು ತೆಗೆದುಕೊಂಡು ಪುನರಾಭಿವೃದ್ಧಿಯನ್ನು ಮಾಡಲಾಗಿದೆ. ಇಲ್ಲಿ ಆಧುನಿಕ ಬಹುಮಹಡಿ ಅಪಾರ್ಟ್ ಮೆಂಟ್ ಗಳನ್ನೂ ನಿರ್ಮಿಸಲಾಗುತ್ತಿದೆ. ಇದರೊಂದಿಗೆ ಕಡಿಮೆ ಮತ್ತು ಮಧ್ಯಮ ಆದಾಯದ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಸುಸಜ್ಜಿತ ಫ್ಲಾಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಈ ಹೊಸ ವಸತಿ ಸೌಲಭ್ಯಗಳಲ್ಲಿ ಒಳಚರಂಡಿ, ಪೈಪ್ ಮೂಲಕ ನೀರು ಸರಬರಾಜು, ಬೀದಿ ದೀಪ ಮತ್ತು ಸುಸಜ್ಜಿತ ರಸ್ತೆಗಳು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒಳಗೊಂಡಿದೆ.

Leave a Reply

Your email address will not be published. Required fields are marked *

error: Content is protected !!