ಉದಯವಾಹಿನಿ, ವಾಷಿಂಗ್ಟನ್: ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿಯಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ವೆನೆಜುವೆಲಾದ ಮೇಲೆ ಏರ್‌ಸ್ಟ್ರೈಕ್ ಮಾಡಿದ ಬಳಿ ತಮ್ಮ ಟ್ರೂಥ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ.
ಅಮೆರಿಕವು ವೆನೆಜುವೆಲಾ ವಿರುದ್ಧ ದೊಡ್ಡ ಪ್ರಮಾಣದ ದಾಳಿ ನಡೆಸಿ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿದು ದೇಶದಿಂದ ಹೊರಗೆ ಕಳುಹಿಸಿದೆ. ಈ ಕಾರ್ಯಾಚರಣೆಯನ್ನು ಅಮೆರಿಕದ ಕಾನೂನು ಜಾರಿ ಸಂಸ್ಥೆಯೊಂದಿಗೆ ಯಶಸ್ವಿಯಾಗಿ ನಡೆಸಲಾಯಿತು. ವಿವರಗಳನ್ನು ಮುಂದೆ ತನ್ನ ಫ್ಲೋರಿಡಾದಲ್ಲಿರುವ ಮಾರ್-ಎ-ಲಾಗೊದಲ್ಲಿ ನಿವಾಸದಲ್ಲಿ ತಿಳಿಸಲಾಗುವುದು ಎಂದು ಹೇಳಿದ್ದಾರೆ. ಶನಿವಾರ ನಸುಕಿನ ಜಾವ ವೆನೆಜುವೆಲಾ ಕಾಲಮಾನ 2 ಗಂಟೆಯ ವೇಳೆಗೆ ರಾಜಧಾನಿ ಕ್ಯಾರಕಾಸ್(Caracas) ಮೇಲೆ ಅಮೆರಿಕದ ವಾಯುಸೇನೆ ಏರ್‌ಸ್ಟ್ರೈಕ್ ಮಾಡಿದೆ. ಕನಿಷ್ಠ 7 ದೊಡ್ಡ ಸ್ಫೋಟಗಳು ಸಂಭವಿಸಿದ್ದು ರಾಜಧಾನಿಯಲ್ಲಿ ಈಗ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹಲವು ಯುದ್ಧ ವಿಮಾನಗಳನ್ನು ಬಳಸಿ ಅಮೆರಿಕ ಈ ದಾಳಿ ನಡೆಸಿದೆ. ನೆಜುವೆಲಾದ ರಕ್ಷಣಾ ಸಚಿವ ವ್ಲಾಡಿಮಿರ್ ಪ್ಯಾಡ್ರಿನೊ ಲೋಪೆಜ್ ಅವರ ಮನೆಯನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆದಿದೆ. ರಾಜಧಾನಿ ಕ್ಯಾರಕಾಸ್‌ನ ಉತ್ತರದಲ್ಲಿರುವ ಲಾ ಗುಯಿರಾ ಬಂದರು ಮೇಲೆಯೂ ಬಾಂಬ್ ದಾಳಿ ನಡೆದಿದೆ.
