ಉದಯವಾಹಿನಿ, ಬೆಂಗಳೂರು: ಭಾರೀ ಪ್ರಮಾಣದ ತೆರಿಗೆ ವಂಚನೆ ಆರೋಪದ ಮೇಲೆ ಬರೋಬ್ಬರಿ ಐದೂವರೆ ಕೋಟಿ ಮೌಲ್ಯದ ಬೆಂಟ್ಲಿ ಕಾರನ್ನ ಆರ್‌ಟಿಒ (RTO) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. 5.50 ರೂ. ಮೌಲ್ಯದ ಕಾರನ್ನ 2,43,50,000 ಕೋಟಿ ರೂ. ಅಂತ ತೋರಿಸಿ ರಿಜಿಸ್ಟ್ರೆಶನ್ ಮಾಡಿಸಿರೋದು ದಾಖಲೆ ಪರಿಶೀಲನೆ ವೇಳೆ ಕಂಡುಬಂದಿದೆ. ಈ ಹಿನ್ನೆಲೆ ಕೋರಮಂಗಲದಲ್ಲಿ ಕಾರನ್ನ ವಶಕ್ಕೆ ಪಡೆಯಲಾಗಿದೆ. ನಕಲಿ ದಾಖಲೆಗಳನ್ನ ನೀಡಿ ನೋಂದಣಿ ಮಾಡಿರುವ ಹಾಗೂ ಸುಮಾರು 70 ಲಕ್ಷ ರೂ. ತೆರಿಗೆ ವಂಚನೆ ಮಾಡಿರುವ ಆರೋಪವಿದೆ. ಅಧಿಕಾರಿಗಳು ಕಾರ್ ಸೀಜ್ ಮಾಡುವ ವೇಳೆ ಬಿಡದೇ ಮಾಲೀಕ ಗಲಾಟೆ ಮಾಡಿದ್ದಾರೆ. ಆರ್‌ಟಿಓನವರೆ ಮೋಸ ಮಾಡಿರೋದು ಎಂದು ಮಾಲೀಕರು ವಾದ ಮಾಡಿದ್ದಾರೆ.
2 ವರ್ಷಗಳ ಹಿಂದೆ ನೋಂದಣಿ ಆಗಿರುವ ಕಾರು. ನಾವೆಲ್ಲ ಫ್ರಾಡ್ ಅಲ್ಲ, ವಿಜಯ್ ಮಲ್ಯ ಹಾಗೇ ನಾವು ಫ್ರಾಡ್ ಅಲ್ಲ. ಆರ್‌ಟಿಓ ನವರೇ ಫ್ರಾಡ್, ನೀವೆ ಫ್ರಾಡ್ ಎಂದು ಗಲಾಟೆ ಮಾಡಿದ್ದಾರೆ. ಜೊತೆಗೆ ಮಾಧ್ಯಮಗಳೊಂದಿಗೆ ಮಾತನಾಡ್ತಾ, ಮೂರು ವರ್ಷಗಳ ಹಿಂದೆಯೇ ತೆರಿಗೆ ಪಾವತಿ ಮಾಡಿದ್ದೇನೆ. ಇವರು ಈಗ ಬಂದಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
