
ಉದಯವಾಹಿನಿ, ಮುಂಜಾನೆ ಗಡಿಬಿಡಿಯಲ್ಲಿ ತಿಂಡಿ ಮಾಡೋದು ಅಂದ್ರೆ ದೊಡ್ಡ ತಲೆನೋವು. ಅದ್ರಲ್ಲೂ ಎಲ್ಲರಿಗೂ ಇಷ್ಟವಾಗುವಂತೆ ಮಾಡೋದು ತುಂಬಾನೇ ಕಷ್ಟದ ಕೆಲಸ. ಅಂಥ ಸಮಯದಲ್ಲಿ ರಾಜ್ಯಾ-ಚಾವಲ್ ಅನ್ನೋ ಹೆಸರೇ ಮನಸ್ಸಿಗೆ ಸಮಾಧಾನ ಕೊಡುತ್ತದೆ. ರಾತ್ರಿ ನೆನೆಸಿದ ರಾಜ್ಯಾ, ಅಕ್ಕಿ ಮತ್ತು ಕೆಲ ಮಸಾಲೆಗಳು ಇದ್ದರೆ ಸಾಕು, ಬೆಸ್ಟ್ ಬ್ರೇಕ್‌ಫಾಸ್ಟ್ ಸಿದ್ಧವಾಗುತ್ತೆ.
ಬೇಕಾಗುವ ಪದಾರ್ಥಗಳು:
ರಾಜ್ಯಾ- ¾ ಕಪ್ (ರಾತ್ರಿ ನೆನೆಸಿದ್ದು)
ಅಕ್ಕಿ- ಕಪ್
ಈರುಳ್ಳಿ-1
ಟೊಮೇಟೋ – 1
ಹಸಿಮೆಣಸು -1
ಶುಂಠಿ-ಬೆಳ್ಳುಳ್ಳಿ ಪೇಸ್ಟ್ -1 ಟೀ ಸ್ಪೂನ್
ಜೀರಿಗೆ – 1 ಟೀ ಸ್ಪೂನ್
ಅರಿಶಿನ – 4 ಟೀ ಸ್ಪೂನ್
ಗರಂ ಮಸಾಲಾ – ¾ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಎಣ್ಣೆ ಅಥವಾ ತುಪ್ಪ-1 ಟೇಬಲ್ ಸ್ಪೂನ್
ನೀರು – ಅಗತ್ಯವಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ:
ಕುಕ್ಕರ್ ಅಥವಾ ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ ಜೀರಿಗೆ ಹಾಕಿ. ಅದಕ್ಕೆ ಈರುಳ್ಳಿ, ಹಸಿಮೆಣಸು ಸೇರಿಸಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಪ್ರೈ ಮಾಡಿ. ನಂತರ ಟೊಮೇಟೋ, ಅರಿಶಿನ, ಉಪ್ಪು ಹಾಕಿ ಚೆನ್ನಾಗಿ ಮೃದುವಾಗುವವರೆಗೆ ಬೇಯಿಸಿ.
ಇದಕ್ಕೆ ನೆನೆಸಿದ ರಾಜ್ಯಾಸೇರಿಸಿ ಎರಡು ನಿಮಿಷ ಹುರಿದು, ತೊಳೆದ ಅಕ್ಕಿ ಹಾಕಿ ನಿಧಾನಕ್ಕೆ ಮಿಶ್ರಣ ಮಾಡಿ. ಈಗ ಗರಂ ಮಸಾಲಾ ಹಾಕಿ, ನೀರು ಸೇರಿಸಿ ಮುಚ್ಚಿ 4-5 ಸಿಟ್ಟು ಬೇಯಿಸಿ. ಪ್ರೆಶರ್ ಇಳಿದ ನಂತರ ಮತ್ತೊಮ್ಮೆ ನಿಧಾನಕ್ಕೆ ತಿರುಗಿಸಿ, ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ.
