ಉದಯವಾಹಿನಿ, ಭಾನುವಾರ ಆರಂಭಗೊಂಡ ಐದನೇ ಮತ್ತು ಅಂತಿಮ ಆಶಸ್ ಟೆಸ್ಟ್‌ನ ಮೊದಲ ದಿನದ ಮಳೆಯಿಂದ ಅಡಚಣೆಯಾದರೂ ಇಂಗ್ಲೆಂಡ್‌ ತಂಡ ಉತ್ತಮ ರನ್‌ ಕಲೆಹಾಕುವಲ್ಲಿ ಯಶಸ್ವಿಯಾಗಿದೆ. ಅನುಭವಿ ಬ್ಯಾಟರ್‌ ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ಜೋಡಿಯ ಅಜೇಯ 154 ರನ್‌ಗಳ ಜೊತೆಯಾಟ ನೆರವಿನಿಂದ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್‌ 3 ವಿಕೆಟ್‌ಗೆ 211 ರನ್‌ ಗಳಿಸಿದೆ.
ಆಸ್ಟ್ರೇಲಿಯಾದ ಆಲ್-ಪೇಸ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ವಿಶ್ವದ ಅಗ್ರ ಎರಡು ಶ್ರೇಯಾಂಕಿತ ಬ್ಯಾಟ್ಸ್‌ಮನ್‌ಗಳಾದ ರೂಟ್‌ ಮತ್ತು ಬ್ರೂಕ್‌ ಇಂಗ್ಲೆಂಡ್ ತಂಡವನ್ನು ರಕ್ಷಿಸಿದರು ಮತ್ತು ಮೇಲುಗೈ ಸಾಧಿಸಿದರು. ಉಭಯ ಆಟಗಾರರು ಅರ್ಧಶತಕ ಬಾರಿಸಿ ದ್ವಿತೀಯ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ರೂಟ್‌ 72* ರನ್‌ ಗಳಿಸಿದ್ದರೆ, ಬ್ರೂಕ್‌ 78* ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಆರಂಭಿಕರಾದ ಜಾಕ್‌ ಕ್ರಾಲಿ(16), ಬೆನ್‌ ಡಕೆಟ್‌(27) ಮತ್ತು ಜಾಕೋಬ್ ಬೆಥೆಲ್(10) ಬೇಗನೆ ವಿಕೆಟ್‌ ಕಳೆದುಕೊಂಡರು. ಪಂದ್ಯಕ್ಕೂ ಮುನ್ನ ಬೋಂಡಿ ಬೀಚ್‌ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ತುರ್ತು ಸೇವಾ ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ಕ್ರಿಕೆಟ್ ತಂಡಗಳು ಸನ್ಮಾನಿಸಿದವು.
ದಾಳಿಕೋರರಲ್ಲಿ ಒಬ್ಬನ ಕಡೆಗೆ ಓಡಿ ಅವನಿಂದ ಬಂದೂಕನ್ನು ಕಸಿದುಕೊಂಡ ಅಹ್ಮದ್ ಅಲ್ ಅಹ್ಮದ್‌ಗೆ ಕಿಕ್ಕಿರಿದ ಪ್ರೇಕ್ಷಕರಿಂದ ಜೋರಾದ ಚಪ್ಪಾಳೆ ಮೂಲಕ ಅಭಿನಂದಿಸಲಾಯಿತು. ಡಿಸೆಂಬರ್ 14 ರಂದು ಸಿಡ್ನಿ ಕ್ರಿಕೆಟ್ ಮೈದಾನದಿಂದ ಸ್ವಲ್ಪ ದೂರದಲ್ಲಿರುವ ಬೀಚ್‌ನಲ್ಲಿ ನಡೆದ ಹನುಕ್ಕಾ ಕಾರ್ಯಕ್ರಮವನ್ನು ಗುರಿಯಾಗಿಸಿಕೊಂಡ ಸಾಜಿದ್ ಮತ್ತು ನವೀದ್ ಅಕ್ರಮ್ ಮೇಲಿದೆ.

Leave a Reply

Your email address will not be published. Required fields are marked *

error: Content is protected !!