ಉದಯವಾಹಿನಿ, ವಿಜಯ ಹಝಾರೆ ಟೂರ್ನಿಯಲ್ಲಿ ಕರ್ನಾಟಕ-ತ್ರಿಪುರ ನಡುವಿನ ಪಂದ್ಯ ಇದೀಗ ಅಸಾಮಾನ್ಯ ಕಾರಣಕ್ಕೆ ಚರ್ಚೆಗೆ ಗ್ರಾಸವಾಗಿದೆ. ಕರ್ನಾಟಕ ವಿರುದ್ಧ ಶತಕ ಬಾರಿಸಿದ ತ್ರಿಪುರ ಆಟಗಾರ ಸ್ವಪ್ಟಿಲ್ ಸಿಂಗ್ ಸಂಭ್ರಮಾಚರಣೆ ವೇಳೆ ಮಾಡಿದ ಅಸಭ್ಯ ಸನ್ನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಬಲಿಷ್ಠ ಮೊತ್ತ ಕಲೆಹಾಕಿತು. ದೇವದತ್ ಪಡಿಕ್ಕಲ್ ಅವರ ಅದ್ಭುತ ಶತಕದ ನೆರವಿನಿಂದ ಕರ್ನಾಟಕ 50 ಓವರ್‌ಗಳಲ್ಲಿ 332 ರನ್‌ಗಳನ್ನು ಗಳಿಸಿತು. ಗುರಿ ಬೆನ್ನತ್ತಿದ ತ್ರಿಪುದ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾದರೂ, ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ವಪ್ಪಿಲ್ ಸಿಂಗ್ ಹೋರಾಟದ ಮನೋಭಾವ ತೋರಿದರು. ಅವರು 93 ಎಸೆತಗಳಲ್ಲಿ 2 ಸಿಕ್ಸರ್‌ಗಳು ಹಾಗೂ 7 ಬೌಂಡರಿಗಳೊಂದಿಗೆ ಶತಕ ಪೂರ್ಣಗೊಳಿಸಿದರು.
ಆದರೆ ಶತಕದ ನಂತರ ಸ್ವಪ್ರಿಲ್ ಬ್ಯಾಟ್ ಬಳಸಿ ಮಾಡಿದ ಅಸಭ್ಯ ಸಂಭ್ರಮಾಚರಣೆ ಗಮನ ಸೆಳೆದಿದ್ದು, ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಈ ನಡೆ ಕ್ರೀಡಾಭಿಮಾನಿಗಳಲ್ಲಿ ಬೇಸರಕ್ಕೆ ಕಾರಣವಾಗಿದೆ.ಪಂದ್ಯದ ಫಲಿತಾಂಶದ ವಿಚಾರಕ್ಕೆ ಬಂದರೆ, 333 ರನ್‌ಗಳ ಗುರಿ ಬೆನ್ನತ್ತಿದ ತ್ರಿಪುರ ತಂಡ 49 ಓವರ್‌ಗಳಲ್ಲಿ 252 ರನ್‌ಗಳಿಗೆ ಸೀಮಿತವಾಯಿತು. ಪರಿಣಾಮ ಕರ್ನಾಟಕ ತಂಡ 80 ರನ್‌ಗಳ ಭರ್ಜರಿ ಜಯ ಸಾಧಿಸಿತು.

Leave a Reply

Your email address will not be published. Required fields are marked *

error: Content is protected !!