ಉದಯವಾಹಿನಿ, ಮೈಸೂರು: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಹೊಸ ಇತಿಹಾಸ ಬರೆಯುವ ಹೊಸ್ತಿಲಲ್ಲಿದ್ದಾರೆ. ದೀರ್ಘಾವಧಿ ಸಿಎಂ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗುತ್ತಿದ್ದಾರೆ.
ಈ ಮೂಲಕ, ಮಾಜಿ ಸಿಎಂ ದಿವಂಗತ ಡಿ.ದೇವರಾಜ ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯ ಮುರಿಯುತಿದ್ದಾರೆ.ಈ ಬಗ್ಗೆ ಮೈಸೂರಿನಲ್ಲಿ ) ಮಾತಾಡಿದ ಸಿಎಂ, ನನಗೂ ದೇವರಾಜ ಅರಸು ಅವರಿಗೂ ನನಗೂ ಹೋಲಿಕೆ ಇಲ್ಲ. ಆದರೆ ಇಬ್ಬರು ಒಂದೇ ಜಿಲ್ಲೆಯಿಂದ ಬಂದವರು. ಈ ರೆಕಾರ್ಡ್ ಮತ್ತೆ ಯಾರೂ ಮುರಿಯುವುದಿಲ್ಲ ಎಂದು ನಾನು ಹೇಳಲಾರೆ. ಏಕೆಂದ್ರೆ ಸಚಿನ್ ರೆಕಾರ್ಡ್‌ನ ಕೊಹ್ಲಿ ಮುರಿಯಲಿಲ್ವಾ..? ರೆಕಾರ್ಡ್ ವಿಚಾರ ಬಿಡಿ, ದಾಖಲೆ ವಿಚಾರ ಬಿಡಿ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಕನಸೇ ಕಂಡಿರಲಿಲ್ಲ ಎಂದರು. ಮುಂದೆ ಇನ್ಯಾರೋ ದಾಖಲೆ ಮುರಿಯಬಹುದು, ನನಗಿಂತ ಹೆಚ್ಚಿನ ಬಜೆಟ್ ಮಂಡಿಸಬಹುದು. ದೇವರಾಜ ಅರಸು ಅವರ ಕಾಲದ ರಾಜಕಾರಣವೇ ಬೇರೆ. ಇವತ್ತಿನ ರಾಜಕಾರಣವೇ ಬೇರೆ ಎಂದರು.
