ಉದಯವಾಹಿನಿ, ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಮೊಹಮ್ಮದ್ ಗಿಯಾಸುದ್ದೀನ್ ಮೊಂಡಲ್ ಮೇಜಿನ ಮೇಲೆ ಹಣದ ಬಂಡಲ್ಗಳನ್ನು ಇಟ್ಟಿರುವ ವಿಡಿಯೋವೊಂದು ವೈರಲ್ ಆಗಿದ್ದು, ಇದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ.ಉತ್ತರ 24 ಪರಗಣ ಜಿಲ್ಲೆಯಲ್ಲಿನ ಬರಸಾತ್ 1 ಪಂಚಾಯತ್ ಸಮಿತಿಯ ಉಪ ಅಧ್ಯಕ್ಷರಾಗಿರುವ ಮೊಂಡಲ್ ಜೊತೆ ಸ್ಥಳೀಯ ಉದ್ಯಮಿ ರಕಿಬುಲ್ ಇಸ್ಲಾಮ್ ಜೊತೆಗಿರುವುದು ಕಂಡು ಬಂದಿದೆ. ಈ ವೇಳೆ ಟೇಬಲ್ ಮೇಲೆ 500 ರೂ ನೋಟುಗಳಿರುವ ಹಣದ ಬಂಡಲ್ ಕಂಡು ಬಂದಿದೆ. ಸೂಚನೆ: ಈ ವಿಡಿಯೋದ ಅಧಿಕೃತತೆಯ ಬಗ್ಗೆ ಈಟಿವಿ ಭಾರತ್ ದೃಢೀಕರಿಸುವುದಿಲ್ಲ.
ಇದು ಹಳೆಯ ವಿಡಿಯೋ ಎಂದು ಸ್ಪಷ್ಟನೆ : ವಿಡಿಯೋದಲ್ಲಿ ಯಾರೋ ಒಬ್ಬರು ನಗದು ಅಥವಾ ಫೈನಾನ್ಸ್ ಮೂಲಕ ಖರೀದಿ ಮಾಡಲಾಗುತ್ತದೆಯೇ ಎಂದು ಫೋನ್‌ನಲ್ಲಿ ಕೇಳುತ್ತಿರುವುದು ಕೇಳಿಸಿದೆ, ಆದರೆ ಇನ್ನೊಬ್ಬ ವ್ಯಕ್ತಿ ಹಣ ತುಂಬಿದ ನೈಲಾನ್ ಬ್ಯಾಗ್ಗೆ ಹಾಕುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋದಲ್ಲಿ ಅಕ್ರಮ ನಗದು ವಹಿವಾಟಿನ ಆರೋಪಗಳಿಗೆ ಕಾರಣವಾಗಿದೆ. ಆದರೆ ಮೊಂಡಲ್ ಮಾತ್ರ ತಮ್ಮ ಮೇಲೆ ಬಂದಿರುವ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ಇದು 2022 ರದ್ದಾಗಿದ್ದು ಮತ್ತು ವಹಿವಾಟಿನಲ್ಲಿ ಅವರ ಪಾತ್ರವಿಲ್ಲ. ನಾನು ಅಲ್ಲಿ ಕುಳಿತಿದ್ದೆ. ಅದು ಹಳೆಯ ವಿಡಿಯೋ, ಕೆಲವು ಸ್ನೇಹಿತರು ಭೂ ವ್ಯವಹಾರದಲ್ಲಿ ಭಾಗಿಯಾಗಿದ್ದರು. ನನಗೆ ತಿಳಿದಿರುವುದು ಇಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾನು ಯಾವುದೇ ತಪ್ಪು ಮಾಡಿಲ್ಲ: ವಿಡಿಯೋದಲ್ಲಿ ಮಾತನಾಡುತ್ತಿರುವ ಇಸ್ಲಾಂ ಕೂಡ ನಾವು ಯಾವುದೇ ತಪ್ಪು ಕಾರ್ಯ ಮಾಡಿಲ್ಲ ಎಂದಿದ್ದು, ಈ ಹಣವೂ ಭೂ ವರ್ಗಾವಣೆಯಲ್ಲಿ ಲಭ್ಯವಾಗಿದೆ. ಇದು ಎರಡು ವರ್ಷದ ಹಿಂದಿನ ವಿಡಿಯೋ. ನನಗೆ ನೆನಪಿರುವಂತೆ ಭೂ ವ್ಯವಹಾರಕ್ಕೆ ಸಂಬಂಧಿಸಿದ ನಗದು ವ್ಯವಹಾರದ ಲೆಕ್ಕ ಹಾಕುತ್ತಿದ್ದೇವೆ. ಮೊಂಡಲ್ ಕೂಡ ಈ ಭೂ ವ್ಯವಹಾರದಲ್ಲಿ ಭಾಗಿಯಾಗಿದ್ದರು. ಈ ಕಾರಣದಿಂದ ಅವರು ಅಲ್ಲಿ ಕಂಡಿದ್ದಾರೆ. ಆದರೆ, ಅದು ಅವರ ಕಚೇರಿಯಲ್ಲ ಎಂದು ಹೇಳಿದ್ದಾರೆ. ಪಕ್ಷದ ಮುಖಂಡರ ಗಮನಕ್ಕೆ ತರಲಾಗುವುದು: ಈ ವಿಡಿಯೋ ಸದ್ಯ ವೈರಲ್ ಆದ ಬಳಿಕ ಮಾತನಾಡಿರುವ ಬರಸತ್ 1ನೇ ಬ್ಲಾಕ್ ಟಿಎಂಸಿ ಸಂಚಾಲಕ ಮೊಹಮ್ಮದ್ ಇಶಾ ಸರ್ಕಾರ್ ಮಾತನಾಡಿ, ಯಾರಾದರೂ ಅಕ್ರಮ ಎಸಗಿದ್ದಲ್ಲಿ ಅವರ ವಿರುದ್ದ ಪಕ್ಷ ಕ್ರಮ ಕೈಗೊಳ್ಳಲಿದೆ. ಭಾನುವಾರ ಈ ವಿಚಾರದ ಕುರಿತಾಗಿ ತಮಗೆ ತಿಳಿದು ಬಂದಿದ್ದು, ಈ ಬಗ್ಗೆ ಪಕ್ಷದ ಮುಖಂಡರ ಗಮನಕ್ಕೆ ತರಲಾಗುವುದು, ಅವರು ತಪ್ಪಿತಸ್ಥರು ಎಂದು ಕಂಡು ಬಂದರೆ, ನಾವು ಕ್ರಮ ಕೈಗೊಳ್ಳುತ್ತೇವೆ. ಇಷ್ಟು ಪ್ರಮಾಣದ ಹಣದ ಮೂಲಗಳ ಬಗ್ಗೆ ಇದೀಗ ಪ್ರಶ್ನೆ ಎದುರಾಗಿದ್ದು, ಈ ಬಗ್ಗೆ ಪರಿಶೀಲಿಸುತ್ತೇವೆ ಎಂದಿದ್ದಾರೆ.
