ಉದಯವಾಹಿನಿ, ಮನುಷ್ಯನ ಜೀವನದಲ್ಲಿ ಕಿಡ್ನಿ ಎಷ್ಟು ಮುಖ್ಯ ಎಂಬುವುದು ಎಲ್ಲರಿಗೂ ಗೊತ್ತು.. ಅಷ್ಟೇ ಅಲ್ಲ ಮಾನವನಿಗೆ ದೇಹದಲ್ಲಿನ ಅಂಗಗಳು ನೆಟ್ಟಗಿದ್ದರೆ ಮಾತ್ರ ನಾವು ಅವನನ್ನು ಆರೋಗ್ಯವಂತ ಎಂದು ಕರೆಯುತ್ತೇವೆ. ಆದರೆ ಭಾರತದ ನೆರೆಯ ದೇಶದಲ್ಲಿರುವ ಈ ಗ್ರಾಮದಲ್ಲಿ ಮಾತ್ರ ಬದುಕುತ್ತಿರುವವರೆಲ್ಲರೂ ಒಂದೇ ಕಿಡ್ನಿ ಮೇಲೆ… ಏನಿದು ವಿಚಿತ್ರ? ಯಾವುದೀ ಹಳ್ಳಿ..? ಎಲ್ಲದಕ್ಕೂ ಉತ್ತರ ಇಲ್ಲಿದೆ. ಪ್ರಪಂಚದಾದ್ಯಂತ ಒಂದಲ್ಲ ಒಂದು ಕಾರಣಕ್ಕಾಗಿ ವಿಶ್ವಪ್ರಸಿದ್ಧವಾಗುವ ಅನೇಕ ಹಳ್ಳಿಗಳಿವೆ. ಇವು ಪ್ರಸಿದ್ದಿಯಾಗಿರುವುದರಿಂದ ಅಂತಹ ಹಳ್ಳಿಗಳಿಗೆ ಭೇಟಿ ನೀಡಲು ಜನರು ದೂರದ ಊರುಗಳಿಂದ ಬರುತ್ತಾರೆ. ಇಂದು ನಾವು ಅಂತಹ ಒಂದು ಹಳ್ಳಿಯ ಬಗ್ಗೆ ತಿಳಿದುಕೊಳ್ಳಲಿದ್ದೇವೆ, ಅಲ್ಲಿ ಹಳ್ಳಿಯಲ್ಲಿರುವ ಬಹುತೇಕ ಎಲ್ಲಾ ಜನರಿಗೆ ಒಂದೇ ಮೂತ್ರಪಿಂಡವಿದೆ. ಕೇಳಲು ಆಶ್ಚರ್ಯವೆನಿಸಿದರೂ ಇದು ನಿಜ. ಈ ಹಳ್ಳಿಯಲ್ಲಿರುವ ಅನೇಕ ಜನರಿಗೆ ಒಂದೇ ಮೂತ್ರಪಿಂಡವಿದೆ. ಈ ವಿಚಿತ್ರ ಹಳ್ಳಿ ಇರವುದೆಲ್ಲಿ ಗೊತ್ತಾ? ಆದರೆ ಮೊದಲಿಗೆ ಎಲ್ಲರ ತಲೆಯಲ್ಲಿ ಮೂಡುವ ಮೊದಲ ಪ್ರಶ್ನೆ ಏನೆಂದರೆ ಈ ಹಳ್ಳಿಯಲ್ಲಿರುವ ಜನರು ಹುಟ್ಟಿನಿಂದಲೇ ಒಂದೇ ಮೂತ್ರಪಿಂಡವನ್ನು ಹೊಂದಿರುತ್ತಾರೆಯೇ? ಎಂಬುವುದು. ಆದರೆ ಇದರ ಹಿಂದಿನ ಕಾರಣವೇ ಬೇರೆ ಇದೆ.
ಅಷ್ಟಕ್ಕೂ ಯಾರೋ ಒಬ್ಬರೋ ಇಬ್ಬರೋ ಒಂದೇ ಕಿಡ್ನಿ ಇಟ್ಟುಕೊಂಡು ಬದುಕುವುದನ್ನು ಸಾಮಾನ್ಯ ಎಂದು ನಾವು ಹೇಳಬಹುದು ಆದರೆ ಈ ಹಳ್ಳಿಯಲ್ಲಿ ಇರುವವರೆಲ್ಲ ಒಂದೇ ಕಿಡ್ನಿ ಹೊಂದಿರುವವರೇ.. ಇದಕ್ಕೆ ಕಾರಣವೇನೆಂದರೆ ಇಲ್ಲಿನ ಕಿತ್ತು ತಿನ್ನುವ ಬಡತನ. ಈ ಹಳ್ಳಿಯ ಜನರು ಒಂದು ಹೊತ್ತಿನ ಊಟಕ್ಕೂ ಕೂಡ ಪರದಾಡುವ ಪರಿಸ್ತಿತಿ ಇರುತ್ತದೆ. ಆದ್ದರಿಂದ ಇಲ್ಲಿನ ಪ್ರತಿಯೊಬ್ಬರೂ ತಮ್ಮ ಪ್ರತಿಯೊಂದು ಮೂತ್ರಪಿಂಡವನ್ನು ಮಾರಿ ಅದರಿಂದ ಹಣ ಸಂಪಾದಿಸುವ ಮೂಲಕ ತಮ್ಮ ಜೀವನವನ್ನು ನಡೆಸುತ್ತಾರೆ.
ಈ ಜನರಿಗೆ ಬೇರೆ ಯಾವುದೇ ಉದ್ಯೋಗ ಮಾರ್ಗವಿಲ್ಲದ ಕಾರಣ, ಈ ಜನರು ತಮ್ಮ ಮೂತ್ರಪಿಂಡಗಳನ್ನು ಮಾರಾಟ ಮಾಡುವ ಮೂಲಕ ಹಣ ಸಂಪಾದಿಸುತ್ತಾರೆ. ಆದ್ದರಿಂದ, ಈ ಹಳ್ಳಿಯಲ್ಲಿರುವ ಅನೇಕ ಜನರಿಗೆ ಒಂದೇ ಮೂತ್ರಪಿಂಡವಿದೆ, ಅದಕ್ಕಾಗಿಯೇ ಈ ಗ್ರಾಮವನ್ನು ಕಿಡ್ನಿ ವ್ಯಾಲಿ ಎಂದೂ ಕರೆಯುತ್ತಾರೆ.
