ಉದಯವಾಹಿನಿ , ನವದೆಹಲಿ: ಭಾರತ ಅಂಡರ್-19 ತಂಡದ ನಾಯಕ ವೈಭವ್‌ ಸೂರ್ಯವಂಶಿ ದಕ್ಷಿಣ ಆಫ್ರಿಕಾ ಕಿರಿಯರ ತಂಡದ ವಿರುದ್ಧ ಸ್ಪೋಟಕ ಅರ್ಧಶತಕವನ್ನು ಬಾರಿಸಿದ್ದಾರೆ. ಎರಡನೇ ಯೂಥ್‌ ಒಡಿಐ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ 14ರ ವಯಸ್ಸಿನ ಸೂರ್ಯವಂಶಿ, ಕಡಿಮೆ ಎಸೆತಗಳಲ್ಲಿ ಫಿಫ್ಟಿ ಸಿಡಿಸಿದ್ದಾರೆ. ಅವರು ಕೇವಲ 19 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಆ ಮೂಲಕ ತಮ್ಮ ಸ್ಪೋಟಕ ಬ್ಯಾಟಿಂಗ್‌ ಫಾರ್ಮ್‌ ಅನ್ನು ಮುಂದುವರಿಸಿದ್ದಾರೆ.
ಭಾರತ ತಂಡದ ಪರ ಇನಿಂಗ್ಸ್ ಆರಂಭಿಸಿದ ವೈಭವ್ ಸೂರ್ಯವಂಶಿ, 24 ಎಸೆತಗಳಲ್ಲಿ 283.33 ಸ್ಟ್ರೈಕ್ ರೇಟ್‌ನಲ್ಲಿ 68 ರನ್ ಗಳಿಸಿದರು. ಈ ಬಿರುಗಾಳಿಯ ಇನಿಂಗ್ಸ್‌ನಲ್ಲಿ, ವೈಭವ್ ಸೂರ್ಯವಂಶಿ 10 ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಬಾರಿಸಿದರು. ದಕ್ಷಿಣ ಆಫ್ರಿಕಾದ ಬಯಾಂಡ ಮಜೋಲಾ ಎಸೆದ ಎಂಟನೇ ಓವರ್‌ನಲ್ಲಿ ಸೂರ್ಯವಂಶಿ ತಮ್ಮ ಅರ್ಧಶತಕವನ್ನು ತಲುಪಿದರು.

ವೈಭವ್ ಸೂರ್ಯವಂಶಿ ತಮ್ಮ ಓವರ್‌ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ 19 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ನಂತರ ಆ ಓವರ್‌ನ ಎರಡನೇ ಮತ್ತು ಮೂರನೇ ಎಸೆತಗಳಲ್ಲಿ ಸಿಕ್ಸರ್‌ಗಳನ್ನು ಬಾರಿಸಿದರು, ನಂತರ ನಾಲ್ಕನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಹೀಗೆ ಸೂರ್ಯವಂಶಿ ಆ ಓವರ್‌ನಲ್ಲಿ 23 ರನ್‌ಗಳನ್ನು ಚಚ್ಚಿದರು. ವೈಭವ್ ಸೂರ್ಯವಂಶಿ 2025-26ರ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿಯಲ್ಲಿಯೂ ಬಿಹಾರ ಪರ ಆಡಿದ್ದಾರೆ. ಅರುಣಾಚಲ ವಿರುದ್ಧದ ಪಂದ್ಯದಲ್ಲಿ ಕೇವಲ 36 ಎಸೆತಗಳಲ್ಲಿ ಶತಕ ಬಾರಿಸಿದ್ದರು. ರಾಂಚಿಯಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಸೂರ್ಯವಂಶಿ 190 ರನ್ ಗಳಿಸಿದರು. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಭಾರತೀಯ ಆಟಗಾರನೊಬ್ಬ ಗಳಿಸಿದ ನಾಲ್ಕನೇ ವೇಗದ ಶತಕ ಇದಾಗಿದೆ. ಸೂರ್ಯವಂಶಿ ಕಳೆದ ವರ್ಷದಿಂದ ಸ್ಥಿರವಾಗಿ ರನ್ ಗಳಿಸುತ್ತಿದ್ದಾರೆ ಮತ್ತು ಅವರ ಬ್ಯಾಟಿಂಗ್‌ನಲ್ಲಿ ಪ್ರಭಾವಶಾಲಿಯಾಗಿದ್ದಾರೆ. ವೈಭವ್ ಖಂಡಿತವಾಗಿಯೂ ಆಯ್ಕೆದಾರರ ಪರಿಶೀಲನೆಗೆ ಒಳಗಾಗುತ್ತಾರೆ. ವೈಭವ್ ಸೂರ್ಯವಂಶಿ ಭವಿಷ್ಯದಲ್ಲಿ ಭಾರತದ ಮುಂದಿನ ದೊಡ್ಡ ಆಟಗಾರನಾಗಬಹುದು.

Leave a Reply

Your email address will not be published. Required fields are marked *

error: Content is protected !!