ಉದಯವಾಹಿನಿ , ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿಗೆ ಸಂಬಂಧಿಸಿ ಭಾರತಕ್ಕೆ ಸುಂಕ ಕಡಿತಗೊಳಿಸಲು ಅಮೆರಿಕದ ಭಾರತೀಯ ರಾಯಭಾರಿ ವಿನಯ್ ಕ್ವಾಟ್ರಾ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮನವಿ ಮಾಡಿದ್ದು ಇದಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ನನ್ನ ಒಳ್ಳೆಯ ಸ್ನೇಹಿತ. ನಾನು ಸಂತೋಷವಾಗಿಲ್ಲ ಎಂಬುದು ಅವರಿಗೆ ಗೊತ್ತಿದೆ ಎಂದು ಹೇಳಿದ್ದಾರೆ ಎಂಬುದಾಗಿ ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಹಾಂ ತಿಳಿಸಿದ್ದಾರೆ. ಏರ್ ಫೋರ್ಸ್ ಒನ್‌ನಲ್ಲಿ ಭಾನುವಾರ ಟ್ರಂಪ್ ಜೊತೆಗೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಅಮೆರಿಕದ ಭಾರತೀಯ ರಾಯಭಾರಿ ವಿನಯ್ ಕ್ವಾಟ್ರಾ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ರಷ್ಯಾದ ತೈಲ ಖರೀದಿಗೆ ಸಂಬಂಧಿಸಿ ಭಾರತದ ಮೇಲೆ ವಿಧಿಸಲಾಗಿರುವ ಸುಂಕವನ್ನು ಕಡಿತಗೊಳಿಸುವಂತೆ ತಿಳಿಸಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ವಾಷಿಂಗ್ಟನ್‌ನಲ್ಲಿರುವ ರಾಯಭಾರಿಯ ಅಧಿಕೃತ ನಿವಾಸವಾದ ಇಂಡಿಯಾ ಹೌಸ್‌ನಲ್ಲಿ ತಮ್ಮನ್ನು ಭೇಟಿಯಾಗಿ ಅವರು ಈ ವಿನಂತಿಯನ್ನು ಸಲ್ಲಿಸಿದ್ದಾರೆ ಎಂದರು. ವಿನಯ್ ಕ್ವಾಟ್ರಾ ಅವರು ಭಾರತವು ಹೇಗೆ ರಷ್ಯಾದ ತೈಲವನ್ನು ಕಡಿಮೆ ಬೆಲೆಗೆ ಖರೀದಿ ಮಾಡುತ್ತಿದೆ ಎಂಬುದರ ಬಗ್ಗೆ ಅವರು ಮಾತನಾಡಲು ಬಯಸಿದ್ದರು ಎಂದು ಗ್ರಹಾಂ ತಿಳಿಸಿದರು.
ಅಗ್ಗದ ರಷ್ಯಾ ತೈಲವನ್ನು ನೀವು ಖರೀದಿಸುತ್ತಿದ್ದರೆ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರ ಯುದ್ಧಕ್ಕೆ ನೀವು ಪ್ರೋತ್ಸಾಹ ಕೊಟ್ಟಂತೆ ಅಲ್ಲವೇ ಎಂದ ಅವರು ಈ ಸಂದರ್ಭದಲ್ಲಿ ರಿಚರ್ಡ್ ಬ್ಲೂಮೆಂಥಾಲ್, ಶೆಲ್ಡನ್ ವೈಟ್‌ಹೌಸ್, ಪೀಟರ್ ವೆಲ್ಚ್, ಡ್ಯಾನ್ ಸುಲ್ಲಿವನ್ ಮತ್ತು ಮಾರ್ಕ್‌ವೇನ್ ಮುಲ್ಲಿನ್ ಸೇರಿದಂತೆ ಕೆಲವು ಯುಎಸ್ ಸೆನೆಟರ್‌ಗಳನ್ನು ಇದ್ದರು. ಇವರನ್ನು ಕೇಳಿ ಎಂದಿದ್ದಕ್ಕೆ ಕ್ವಾಟ್ರಾ ಅವರಿಂದ ತಕ್ಷಣದ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ. ಟ್ರಂಪ್ ಅವರು ಸುಂಕ ವಿಧಿಸಿದ್ದರಿಂದ ಭಾರತ ಈಗ ರಷ್ಯಾದಿಂದ ಗಣನೀಯವಾಗಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ತೈಲವನ್ನು ಖರೀದಿಸುತ್ತಿದೆ ಎಂದು ನಂಬುತ್ತೇನೆ. ರಷ್ಯಾ ಮತ್ತು ಉಕ್ರೇನ್ ಸಂಘರ್ಷವನ್ನು ಕೊನೆಗೊಳಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮೇಲೆ ಒತ್ತಡ ಹೇರಬೇಕು ಎಂದು ಲಿಂಡ್ಸೆ ಗ್ರಹಾಂ ಅವರು ತಿಳಿಸಿದರು.
