ಉದಯವಾಹಿನಿ ,  ಕೊಡಗು ಜಿಲ್ಲೆಯವರಾಗಿ ದೇಶ-ವಿದೇಶಗಳಲ್ಲೂ ಖ್ಯಾತಿ ಪಡೆದಿರುವ ಸಿನಿಮಾ ತಾರೆ ರಶ್ಮಿಕಾ ಮಂದಣ್ಣ ಆದಾಯ ತೆರಿಗೆ ಪಾವತಿಯಲ್ಲಿ ಕೊಡಗಿಗೆ ನಂಬರ್ 1 ಆಗಿ ಹೊರಹೊಮ್ಮಿದ್ದಾರೆ.
ಕನ್ನಡ ಚಿತ್ರರಂಗದಿಂದ ಗುರುತಿಸಿಕೊಂಡು ನಂತರದಲ್ಲಿ ತೆಲುಗು ಸೇರಿದಂತೆ ಬಾಲಿವುಡ್‌ನಲ್ಲಿಯೂ ಬಹುಬೇಡಿಕೆಯ ನಟಿಯಾಗಿರುವ ರಶ್ಮಿಕಾ ಮಂದಣ್ಣ ತಮ್ಮ ಉದ್ಯಮದ ಹಣಕಾಸಿನ ವಹಿವಾಟನ್ನು ರಶ್ಮಿಕಾ ಮಂದಣ್ಣ ಪ್ರೊಡಕ್ಷನ್ಸ್ ಎಲ್ಎಲ್‌ಪಿ ಹೆಸರಿನಲ್ಲೇ ಮಾಡುತ್ತಿದ್ದಾರೆ.

022 ರ ಆಗಸ್ಟ್‌ನಲ್ಲಿ ಈ ಸಂಸ್ಥೆ ಸ್ಥಾಪನೆಯಾಗಿದ್ದು ಈಗ 2025-26ನೇ ಆರ್ಥಿಕ ವರ್ಷದಲ್ಲಿ ಕೊಡಗು ಜಿಲ್ಲೆಯಿಂದ ಅತೀ ಹೆಚ್ಚು ಆದಾಯ ತೆರಿಗೆ ಪಾವತಿದಾರರಾಗಿ ಇವರು ಗುರುತಿಸಲ್ಪಟ್ಟಿದ್ದಾರೆ. ಪ್ರಸಕ್ತ ಸಾಲಿನ ಆರ್ಥಿಕ ವರ್ಷದ ಮೂರು ಅವಧಿಯಲ್ಲಿ ತೆರಿಗೆ ಪಾವತಿಯಲ್ಲಿ ಇವರೇ ನಂಬರ್ 1 ಆಗಿದ್ದಾರೆ. ಈ ವರ್ಷದ ಹಣಕಾಸು ವರ್ಷ ಅಂತ್ಯವಾಗುವ ಮಾರ್ಚ್‌ವರೆಗೂ ಈ ಸ್ಥಾನದಲ್ಲೇ ರಶ್ಮಿಕಾ ಮುಂದುವರೆಯಬಹುದು ಎಂಬ ವಿಶ್ವಾಸವನ್ನು ಆದಾಯ ತೆರಿಗೆ ಇಲಾಖೆ ಹೊಂದಿದೆ.

Leave a Reply

Your email address will not be published. Required fields are marked *

error: Content is protected !!