
ಉದಯವಾಹಿನಿ , ಮಯಾಂಕ್ ಅಗರ್ವಾಲ್ ಶತಕ ಹಾಗೂ ದೇವದತ್ ಪಡಿಕ್ಕಲ್ ಅರ್ಧಶತಕಗಳ ಬಲದಿಂದ ಕರ್ನಾಟಕ ತಂಡ , ಆರನೇ ಸುತ್ತಿನ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ 150 ರನ್‌ಗಳ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಸತತ ಆರನೇ ಜಯ ದಾಖಲಿಸಿತು ಹಾಗೂ ಎ ಗುಂಪಿನ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. 107 ಎಸೆತಗಳಲ್ಲಿ 100 ರನ್ ಗಳಿಸಿ ಕರ್ನಾಟಕ ಗೆಲುವಿಗೆ ನೆರವು ನೀಡಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
