ಉದಯವಾಹಿನಿ , ಆಸ್ಟ್ರೇಲಿಯಾ ತಂಡದ ನಾಯಕ ಹಾಗೂ ಹಿರಿಯ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ ಇಂಗ್ಲೆಂಡ್ ವಿರುದ್ಧ ಐದನೇ ಹಾಗೂ ಆಷಸ್ ಟ್ರೋಫಿ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಶತಕವನ್ನು ಬಾರಿಸಿದ್ದಾರೆ. ತಮ್ಮ ಶತಕದ ಮೂಲಕ ಅವರು 96 ವರ್ಷಗಳ ಇಂಗ್ಲೆಂಡ್ ಮಾಜಿ ಬ್ಯಾಟ್ಸ್‌ಮನ್ ಜ್ಯಾಕ್ ಹಾಬ್ಸ್ (Jack Hobbs) ಅವರ ಹಳೆಯ ದಾಖಲೆಯೊಂದನ್ನು ಮುರಿದಿದ್ದಾರೆ. ಸ್ಟೀವನ್ ಸ್ಮಿತ್‌ಗೂ ಮುನ್ನ ಟ್ರಾವಿಸ್ ಹೆಡ್ ಸ್ಪೋಟಕ ಶತಕವನ್ನು ಬಾರಿಸಿದ್ದರು. ಇವರಿಬ್ಬರ ಶತಕಗಳ ಬಲದಿಂದ ಆಸ್ಟ್ರೇಲಿಯಾ ತಂಡ ಐದನೇ ಟೆಸ್ಟ್ ಪಂದ್ಯದ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿದೆ.
ನಾಲ್ಕು ಪಂದ್ಯಗಳ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ ಸರಣಿಯಲ್ಲಿ 3-1 ಮುನ್ನಡೆಯನ್ನು ಕಾಯ್ದುಕೊಂಡಿದೆ. ಇದೀಗ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದಲ್ಲಿಯೂ ಕಾಂಗರೂ ಪಡೆ ಮೇಲುಗೈ ಸಾಧಿಸಿದೆ. ಇದಕ್ಕೆ ಕಾರಣರಾಗಿದ್ದು, ಟ್ರಾವಿಸ್ ಹೆಡ್ ಹಾಗೂ ಸ್ಟೀವನ್ ಸ್ಮಿತ್. ಈ ಇಬ್ಬರೂ ಶತಕಗಳನ್ನು ಬಾರಿಸಿದ್ದಾರೆ. ಮೂರನೇ ದಿನ ಟ್ರಾವಿಸ್ ಹೆಡ್ ಮೂರನೇ ದಿನ ಶತಕವನ್ನು ಸಿಡಿಸಿದ ಬಳಿಕ 163 ರನ್‌ಗಳ ಮೂಲಕ ತಮ್ಮ ಇನಿಂಗ್ಸ್ ಅನ್ನು ಮುಗಿಸಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಸ್ಮಿತ್ ಅದ್ಭುತವಾಗಿ ಬ್ಯಾಟ್ ಮಾಡಿದ್ದಾರೆ.
