ಉದಯವಾಹಿನಿ , ಚಿತ್ರದುರ್ಗ: ಸಕಾಲಕ್ಕೆ ಮದುವೆ ಮಾಡಲಿಲ್ಲವೆಂದು ಆಕ್ರೋಶಗೊಂಡ ಪಾಪಿಪುತ್ರನೋರ್ವ (Son) ಹೆತ್ತ ತಂದೆಯನ್ನೇ ಬರ್ಬರವಾಗಿ ಕೊಲೆಗೈದಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಅತಿಘಟ್ಟ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸಣ್ಣನಿಂಗಪ್ಪ ಮೃತ ತಂದೆ. ಈತನ ಚಿಕ್ಕಮಗ ನಿಂಗರಾಜ್ ನನ್ನ ಜೊತೆಗೆ ಬೆಳೆದ ಸ್ನೇಹಿತರೆಲ್ಲರೂ ಮದುವೆಯಾದರು. ಆದರೆ ನೀನು ನನಗೆ ಸಕಾಲಕ್ಕೆ ಮಾಡಲಿಲ್ಲವೆಂದು ತಂದೆಯೊಂದಿಗೆ ದಿನವೂ ಜಗಳ ಮಾಡುತ್ತಿದ್ದ. ಈ ವಿಚಾರವಾಗಿ ಅಣ್ಣ, ಅಕ್ಕ, ತಾಯಿ, ಕುಟುಂಬಸ್ಥರು ಎಷ್ಟೇ ಬುದ್ಧಿವಾದ ಹೇಳಿದರೂ ಜಗಳ ಮಾತ್ರ ನಿಲ್ಲಿಸಿರಲಿಲ್ಲ. ಇದೇ ವಿಚಾರಕ್ಕೆ ಸಿಟ್ಟಾಗಿದ್ದ ನಿಂಗರಾಜ್ (36) ಬುಧವಾರ ರಾತ್ರಿ ತಂದೆ ಸಣ್ಣನಿಂಗಪ್ಪ (65) ಮಲಗಿದ್ದ ವೇಳೆ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಹತ್ಯೆಗೈದಿದ್ದಾನೆ.
