ಉದಯವಾಹಿನಿ , ಚಂಡೀಗಢ: ಹರಿಯಾಣದ ಮಹಿಳೆಯೊಬ್ಬರು 10 ಹೆಣ್ಣುಮಕ್ಕಳ ನಂತರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಂದೆಗೆ 10 ಮಕ್ಕಳ ಹೆಸರನ್ನು ಕೇಳಿದಾಗ ಹೆಣಗಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಜನವರಿ 4ರಂದು 37 ವರ್ಷದ ಮಹಿಳೆ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಅಂದೇ ಡಿಸ್ಚಾರ್ಜ್ ಕೂಡ ಆಗಿದ್ದಾರೆ. ಮಹಿಳೆ ಹಾಗೂ ಸಂಜಯ್ ಕುಮಾರ್ ದಂಪತಿ 2007ರಲ್ಲಿ ಮದುವೆಯಾಗಿದ್ದರು. 38 ವರ್ಷದ ಸಂಜಯ್ ಕುಮಾರ್ ಅವರು ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. 19 ವರ್ಷಗಳ ಬಳಿಕ ದಂಪತಿಗೆ ಗಂಡು ಮಗುವಾಗಿದ್ದು, ಹಿರಿಯ ಮಗಳು 12ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಇದೇ ವೇಳೆ 10 ಹೆಣ್ಣುಮಕ್ಕಳ ಹೆಸರನ್ನು ಹೇಳ್ತೀರಾ ಅಂತ ವರದಿಗಾರ್ತಿಯೊಬ್ಬರು ತಂದೆ ಸಂಜಯ್ ಕುಮಾರ್ ಬಳಿ ಕೇಳಿದಾಗ ಹೆಣಗಾಡಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ
