
ಉದಯವಾಹಿನಿ ಎಂಬುವುದು ಮಕ್ಕಳಿಗಾಗಲಿ ದೊಡ್ಡವರಿಗಾಗಲಿ ತುಂಬಾನೇ ಅವಶ್ಯಕ. ಮೆರೆವು ಎಂಬುವುದು ಎಲ್ಲರಲ್ಲೂ ಇರುತ್ತದೆ, ಆದರೆ ಮರೆವಿನ ಕಾಯಿಲೆ ಇದೆ ಎಂದಾದರೆ ಮುಗೀತು, ನಮ್ಮ ಜೀವನದ ಪ್ರಗತಿಯ ಬಾಗಿಲು ಮುಚ್ಚಿದಂತೆ ಎಂದು ಹೇಳಿದರೂ ತಪ್ಪಾಗಲ್ಲ, ಆದರೆ ನೆನಪಿನ ಶಕ್ತಿ ಎಂಬುವುದು ತುಂಬಾನೇ ಮುಖ್ಯ.ಆದ್ದರಿಂದ ಮಕ್ಕಳಿರಲಿ-ದೊಡ್ಡವರಿರಲಿ ನೆನಪಿನ ಶಕ್ತಿ ಕಾಪಾಡಿಕೊಳ್ಳುವುದು ಅವಶ್ಯಕವಾಗಿದೆ. ಕೆಲವೊಂದು ಗಿಡಮೂಲಿಕೆಗಳು ನೆನಪಿನ ಶಕ್ತಿ ವೃದ್ಧಿಸಲು ಸಹಕಾರಿ. ಆ ಗಿಡಮೂಲಿಕೆಗಳಾವುವು ಎಂದು ನೋಡೋಣ ಬನ್ನಿ:
1. ಬ್ರಾಹ್ಮಿ ಅಥವಾ ಒಂದೆಲಗ: ಬ್ರಾಹ್ಮಿ ಅಥವಾ ಒಂದೆಲಗ ಎಂದು ಕಕರೆಯಲ್ಪಡುವ ನೆನಪಿನ ಶಕ್ತಿ ಹೆಚ್ಚಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. ಇದರ ರಸವನ್ನು ತುಂಬಾ ಚಿಕ್ಕ ಮಕ್ಕಳಿಗೆ ಕೂಡ ನೀಡಬಹುದು. ಬ್ರಾಹ್ಮಿ ಎಲೆ ಸೇವಿಸುವುದರಿಂದ ಬುದ್ಧಿವಂತಿಕೆ ಹೆಚ್ಚಾಗುವುದು, ಏಕಾಗ್ರತೆ ತುಂಬಾ ಚೆನ್ನಾಗಿರುತ್ತದೆ. ಇದನ್ನು ಮಕ್ಕಳ ಸಲಾಡ್‌ನಲ್ಲಿ ನೀಡಬಹುದು, ಹಾಗೇ ಒಂದು ಎಲೆ ಅಗೆದು ತಿನ್ನಲು ಹೇಳಬಹುದು, ಇನ್ನೂ ಒಂದು ವರ್ಷ ತುಂಬಿರದ ಮಗುವಾದರೆ ಅದರ ಸ್ವಲ್ಪ ರಸ ಕೊಡಬಹುದು. ಇನ್ನು ದೊಡ್ಡವರು ತಮ್ಮ ಟೀಯಲ್ಲಿ ಹಾಕಬಹುದು, ಚಟ್ನಿ ಮಾಡಿ ತಿನ್ನಬಹುದು. ಇದು ಗದ್ದೆಯಲ್ಲಿ ತುಂಬಾ ಸಿಗುತ್ತದೆ. ನೀವು ಒಂದು ಚೀಲದಲ್ಲಿ ಮಣ್ಣು ತುಂಬಿ ಅದರಲ್ಲಿ ಬೆಳೆಸಿದರೂ ತುಂಬಾ ಚೆನ್ನಾಗಿ ಬರುತ್ತದೆ.
2. ಶಂಖಪುಷ್ಪ: ಮಾನಸಿಕ ಒತ್ತಡ ಹೆಚ್ಚಾದರೆ ಕೂಡ ಮರೆವು ಸಮಸ್ಯೆ ಉಂಟಾಗುವುದು. ಶಂಖಪುಷ್ಪ ಮೆದುಳಿಗೆ ವಿಶ್ರಾಂತಿಯ ಅನುಭವ ನೀಡುತ್ತದೆ. ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾದಾಗ ಇದನ್ನು ಬಳಸಿದರೆ ಸಾಕು ನಿಮ್ಮೆಲ್ಲಾ ಚಿಂತೆ ದೂರಾಗುವುದು. ಇದನ್ನು ಮಲಗುವಾಗ ಬಳಸಬೇಕು. ನೀವು ಇದನ್ನು ಬ್ರಾಹ್ಮಿ ಜೊತೆ ಮಿಕ್ಸ್ ಮಾಡಿ ಬೇಕಾದರೆ ಬಳಸಬೇಕು. ಮರಿ ನೆನಪಿನ ಶಕ್ತಿ ವೃದ್ಧಿಸಲು ಮಾತ್ರವಲ್ಲ, ತಲೆ, ಗಂಟಲು, ಕಣ್ಣಿನ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಇದನ್ನು ತುಪ್ಪದಲ್ಲಿ ಹಾಕಿ ಸೇವಿಸಿ.
3. ಅಶ್ವಗಂಧ: ಅಸ್ವಗಂಧ ಕೂಡ ನೆನಪಿನ ಶಕ್ತಿ ಹೆಚ್ಚಿಸುವ ಪ್ರಮುಖ ಗಿಡಮೂಲಿಕೆಯಾಗಿದೆ. ಅಶ್ವಗಂಧ ಬಳಸುವುದರಿಂದ ವಯಸ್ಸಾದಾಗ ಕಾಡುವ ಮರೆವಿನ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ. ನೀವು ಅಶ್ವಗಂಧವನ್ನು ಪ್ರತಿದಿನ ಬೇಕಾದರೂ ತೆಗೆದುಕೊಳ್ಳಬಹುದು. ಅಶ್ವಗಂಧ ಮಾನಸಿಕ ಒತ್ತಡ ಕಡಿಮೆ ಮಾಡಲು ತುಂಬಾನೇ ಪ್ರಯೋಜನಕಾರಿಯಾಗಿದೆ. ಅಶ್ವಗಂಧ ಬಳಸುವುದರಿಂದ ರಾತ್ರಿ ಸುಖ ನಿದ್ದೆಗೆ ಕೂಡ ಸಹಕಾರಿಯಾಗಿದೆ. ಇದನ್ನು ದಿನದಲ್ಲಿ ಯಾವುದೇ ಸಮಯದಲ್ಲಿ ಬೇಕಾದರೂ ಸೇವಿಸಬಹುದು. ಇದನ್ನು ದಿನದಲ್ಲಿ ಒಂದು ಗ್ರಾಂ ಬಳಸಬಹುದು.
4. ನುಗ್ಗೆಹೂ: ನುಗ್ಗೆಹೂ ಕೂಡ ನೆನಪಿನ ಶಕ್ತಿ ಹೆಚ್ಚಿಸಲು ತುಂಬಾನೇ ಸಹಕಾರಿಯಾಗಿದೆ. ನುಗ್ಗೆ ಹೂ ತಿನ್ನುವುದರಿಂದ ಕಣ್ಣಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ನುಗ್ಗೆ ಹೂ ನಿಮ್ಮ ಮಗುವಿಗೆ ಕೊಡ್ತಾ ಇದ್ದರೆ ನೆನಪಿನ ಶಕ್ತಿ ಹೆಚ್ಚುವುದು. ಇದನ್ನು ಸಾಂಬಾರ್ ಅಥವಾ ಪಲ್ಯ ಮಾಡುವಾಗ ಹಾಕಿ ನೀಡಬಹುದು
5. ಬೋರೆಹಣ್ಣು: ಬೋರೆಹಣ್ಣು ಕೆಲವರಿಗೆ ಇಷ್ಟವಾಗುವುದು, ಇನ್ನು ಕೆಲವರು ಇದನ್ನು ಇಷ್ಟಪಡಲ್ಲ, ಆದರೆ ಜ್ಞಾಪಕ ಶಕ್ತಿ ಹೆಚ್ಚಿಸಲು ತುಂಬಾನೇ ಸಹಕಾರಿಯಾಗಿದೆ. ನೀವು 10-15ರ ಬೋರೆಹಣ್ಣನ್ನು ನೀರಿನಲ್ಲಿ ಹಾಕಿ ಕುದಿಸಿ, ಅದು ಆರಿದ ಮೇಲೆ ಆ ನೀರನ್ನು ಕುಡಿಯಿರಿ. ಇದನ್ನು ನಿರಂತರವಾಗಿ ಒಂದರಿಂದ ಎರಡು ತಿಂಗಳು ಕುಡಿದರೆ ಜ್ಙಾಪಕ ಶಕ್ತಿ ಹೆಚ್ಚುವುದು.
