ಉದಯವಾಹಿನಿ :ಫಿಟ್ ಆಗಿರಲು ದೇಹಕ್ಕೆ ಹಲವಾರು ರೀತಿಯ ವಿಟಮಿನ್‌ಗಳು ಬೇಕಾಗುತ್ತವೆ. ಕಾರ್ನ್‌ ಕೂಡ ನಮ್ಮನ್ನು ಆರೋಗ್ಯವಾಗಿಡಬಲ್ಲ ಆಹಾರಗಳಲ್ಲೊಂದು. ಇದರಲ್ಲಿ ಸಾಕಷ್ಟು ನಾರಿನಂಶವಿದೆ. ಹೊಟ್ಟೆಯ ಆರೋಗ್ಯಕ್ಕೂ ಇದು ಪ್ರಯೋಜನಕಾರಿ.

ಕಣ್ಣುಗಳಿಗೆ ಪ್ರಯೋಜನಕಾರಿ ಕಣ್ಣುಗಳನ್ನು ಆರೋಗ್ಯವಾಗಿಟ್ಟುಕೊಳ್ಳಲು ಕಾರ್ನ್‌ ಅನ್ನು ನಿಯಮಿತವಾಗಿ ಸೇವನೆ ಮಾಡಬೇಕು.ಇದು ಬಹಳಷ್ಟು ಲುಟೀನ್ ಅನ್ನು ಹೊಂದಿರುತ್ತದೆ. ಹಾಗಾಗಿ ಜೋಳದ ಸೇವನೆಯಿಂದ ದೃಷ್ಟಿಶಕ್ತಿ ಹೆಚ್ಚುತ್ತದೆ. ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಅವಶ್ಯವಾಗಿ ಕಾರ್ನ್‌ ತಿನ್ನಿ.

ಜೀರ್ಣಕ್ರಿಯೆಗಾಗಿ ಕಾರ್ನ್ ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿಯಾಗಿದೆ. ಇದು ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿರಿಸುತ್ತದೆ. ಏಕೆಂದರೆ ಇದರಲ್ಲಿ ಫೈಬರ್‌ ಅಂಶ ಹೇರಳವಾಗಿದೆ. ಮಲವಿಸರ್ಜನೆಯ ಸಮಸ್ಯೆಗಳಿದ್ದರೆ ಕಾರ್ನ್ ಅನ್ನು ಸೇವಿಸಬಹುದು.

ರಕ್ತದಲ್ಲಿನ ಸಕ್ಕರೆನಿಯಂತ್ರ  ಕಾರ್ನ್ ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಮಾಡುತ್ತದೆ. ಇದನ್ನು ಪ್ರತಿದಿನ ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

ಕಣ್ಣುಜೋಳವನ್ನು ಸೇವಿಸುವುದರಿಂದ ತೂಕ ಕಡಿಮೆಯಾಗುತ್ತದೆ. ಇದು ಬಹಳಷ್ಟು ಫೈಬರ್ ಅನ್ನು ಹೊಂದಿರುವುದರಿಂದ ಹೊಟ್ಟೆಯನ್ನು ಆರೋಗ್ಯಕರವಾಗಿರಿಸುತ್ತದೆ. ಮತ್ತೆ ಮತ್ತೆ ಹಸಿವಿನ ಅನುಭವವಾಗುವುದಿಲ್ಲ. ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *

error: Content is protected !!