ಉಯವಾಹಿನಿ,: ಶ್ರೀನಗರ : ಚಳಿಗೆ ಜನರು ಗಡಗಡನೆ ನಡುಗುತ್ತಿದ್ದಾರೆ. ಮನೆಯಿಂದ ಹೊರಬರಲಾಗದೆ ಬಹಳಷ್ಟು ಮಂದಿ ಕಂಬಳಿ ಹೊದ್ದು ಮಲಗಿದ್ದಾರೆ. ಎರಡೆರಡು ಬಟ್ಟೆ, ಸ್ವೆಟರ್ ಧರಿಸದೆ ಮನೆಯಿಂದ ಹೊರಬರಲಾಗುತ್ತಿಲ್ಲ. ಇದರ ನಡುವೆ ಹೃದಯಸ್ಪರ್ಶಿ ಘಟನೆಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಜಮ್ಮುವಿನಲ್ಲಿ ಕಾನ್‌ಸ್ಟೆಬಲ್ ಗುರ್ನಾಮ್ ಸಿಂಗ್ ಪ್ರತಿಮೆಗೆ ಅವರ ತಾಯಿ ಜಸ್ವಂತ್ ಕೌರ್, ಮಾತೃವಾತ್ಸಲ್ಯ ತೋರಿದ್ದಾರೆ. ಗುರ್ನಾಮ್ ಸಿಂಗ್ ಪ್ರತಿಮೆಯ ಸುತ್ತಲೂ ಕಂಬಳಿ ಹೊದಿಸಿ, ಕೊರೆಯುವ ಚಳಿಯಿಂದ ಅವರನ್ನು ರಕ್ಷಿಸಿದರು. ಜಸ್ವಂತ್ ಕೌರ್‌ಗೆ, ಆಕೆಯ ಪುತ್ರ ಗುರ್ನಮ್ ಕೇವಲ ಯುದ್ಧದಲ್ಲಿ ಮಡಿದ ಸೈನಿಕನಲ್ಲ. ಆತ ಅವಳ ಜೀವಂತ, ಉಸಿರಾಡುವ ಮಗ. ಅವಳ ಹೃದಯದಲ್ಲಿ ಶಾಶ್ವತವಾಗಿ ಕೆತ್ತಲಾಗಿದೆ. ನಾನು ಒಬ್ಬ ತಾಯಿ. ಈ ಕೊರೆಯುವ ಚಳಿಯಲ್ಲಿ, ನಮ್ಮನ್ನು ನಾವು ಬೆಚ್ಚಗಿಡಲು ಪ್ರಯತ್ನಿಸುವಾಗ ನನ್ನ ಮಗನ ಪ್ರತಿಮೆಯನ್ನು ಕೊರೆಯುವ ಚಳಿಗೆ ಒಡ್ಡಲು ನಾನು ಹೇಗೆ ಬಿಡಲಿ? ಎಂದು ಅವರು ಹೇಳಿರುವುದು ಮನಕಲಕುವಂತಿದೆ.

Leave a Reply

Your email address will not be published. Required fields are marked *

error: Content is protected !!