ಉಯವಾಹಿನಿ, ಬಿಗ್ ಬಾಸ್ ಮನೆಯೊಂದು ಎರಡು ಬಾಗಿಲು ಆಗಿದೆ. ಒಂದ್ಕಡೆ ಗಿಲ್ಲಿ, ಕಾವ್ಯ, ರಕ್ಷಿತಾ, ರಾಶಿಕಾ, ರಘು, ಧನುಷ್ ಆದ್ರೆ, ಮತ್ತೊಂದು ಕಡೆ ಅಶ್ವಿನಿ ಮತ್ತು ಧ್ರುವಂತ್ ಎನ್ನುವಂತಾಗಿದೆ. ಊಟ-ತಿಂಡಿ, ಮಾತುಕತೆ ಎಲ್ಲವೂ ಸಪರೇಟ್ ಆಗಿದೆ. ದೊಡ್ಮನೆ ಎರಡು ಭಾಗ ಆಗಿರುವುದಕ್ಕೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಮನೆಯಲ್ಲಿ ದೂರಿದವರ ಬಾಯಲ್ಲೇ ಭೇಷ್ ಎನಿಸಿಕೊಂಡವರಿಗೆ ಕಿಚ್ಚನ ಕೊನೆಯ ಚಪ್ಪಾಳೆ ಸಿಕ್ಕಿದೆ.
ಹೌದು, ಅಶ್ವಿನಿ ಮತ್ತು ಧ್ರುವಂತ್ ಇಬ್ಬರೂ ಈ ಸೀಸನ್‌ನ ಕೊನೆಯ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಟಿಕೆಟ್ ಟು ಫಿನಾಲೆ ಕಂಟೆಸ್ಟೆಂಟ್ ಟಾಸ್ಕ್‌ಗಳಲ್ಲಿ ಈ ಜೋಡಿ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿತು. ಅದರಲ್ಲೂ ಅಶ್ವಿನಿ ಗೌಡ ತಮ್ಮ ಶಕ್ತಿಮೀರಿ ಟಾಸ್ಕ್‌ಗಳನ್ನು ಆಡಿ ಗಮನ ಸೆಳೆದರು. ಮೊದಲಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ದೂರುತ್ತಲೇ ಬಂದಿದ್ದವರು, ಅಶ್ವಿನಿಯನ್ನು ಹೊಗಳಿದರು. ಉತ್ತಮ ಪಟ್ಟವನ್ನೂ ಕಟ್ಟಿದರು. ಇತ್ತ ಧ್ರುವಂತ್ ವಾರದ ಕೊನೆಯ ಕಳಪೆ ಪಟ್ಟವನ್ನು ಅಲಂಕರಿಸಿದರು. ಮನೆಯವರ ಆಟವನ್ನು ಗಮನಿಸಿದ್ದ ಕಿಚ್ಚ ಸುದೀಪ್ ಕೆಲವು ವಿಚಾರಗಳಿಗೆ ಅಸಮಾಧಾನ ಹೊರಹಾಕಿದರು. ಮನೆ ಎರಡು ಭಾಗ ಆಗಿದೆ. ಆರು ಜನರ ಟೀಂ ಒಂದ್ಕಡೆ ಮತ್ತು ಇಬ್ಬರ ಟೀಂ ಇನ್ನೊಂದ್ಕಡೆ ಎನ್ನುವಂತಾಗಿದೆ. ಇಡೀ ವಾರದ ಎಪಿಸೋಡ್ಸ್ ನೋಡಿದಾಗ ನನಗೆ ಅನಿಸಿದ್ದು, ಒಬ್ಬ ವ್ಯಕ್ತಿಯ ಹಠ, ಛಲ, ಫೋಕಸ್. ಅವಮಾನ ಮಾಡಿದವರ ಬಾಯಲ್ಲೇ ಹೊಗಳಿಸಿಕೊಳ್ತೀವಲ್ಲ ಅಲ್ಲೇ ಗೆಲುವಿನ ಪ್ರಾರಂಭ ಅಂತ ಕಿಚ್ಚ ಹೇಳಿದ್ದಾರೆ. ಸುದೀಪ್ ಮಾತಿಗೆ ಅಶ್ವಿನಿ ಮತ್ತು ಧ್ರುವಂತ್ ಭಾವುಕರಾಗಿ ಕಣ್ಣಲ್ಲಿ ನೀರು ತುಂಬಿಕೊಳ್ತಾರೆ.
