ಉಯವಾಹಿನಿ, 2025ರ ಮಹಾಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದ ನೀಲಿ ಕಂಗಳ ಚೆಲುವೆ ಮೊನಾಲಿಸಾ ಕೊನೆಗೂ ನಟಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. 2 ದಿನಗಳ ಹಿಂದಷ್ಟೇ ಮೊನಾಲಿಸಾ & ಸ್ಮಾರ್ತ್ ಮೆಹ್ತಾ ಅಭಿನಯಿಸಿರುವ ʻದಿಲ್ ಜಾನಿಯಾʼ ರೊಮ್ಯಾಂಟಿಕ್ ಆಲ್ಬಂಬ್ ಸಾಂಗ್ ರಿಲೀಸ್ ಆಗಿದೆ. ಈ ಸ್ಪೆಷಲ್ ಸಾಂಗ್‌ನಲ್ಲಿ ನಟ ಸಮರ್ಥ್ ಮೆಹ್ತಾ ಜೊತೆ ಮೊನಾಲಿಸಾ ಹೆಜ್ಜೆ ಹಾಕಿದ್ದು, ಅಭಿಮಾನಿಗಳಿಂದಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಹನಿಮನಿ ಪ್ರೊಡಕ್ಷನ್ ಹೌಸ್ ನಿರ್ಮಾಣದ ಈ ಗೀತೆಯನ್ನ ರಿಥಮ್ ಸಂಧ್ಯಾ ನಿರ್ದೇಶನ ಮಾಡಿದ್ದಾರೆ. ರಾಜಾ ಹರ್ಭಜನ್ ಸಿಂಗ್ ಸಂಗೀತ ಸಂಯೋಜಕರಾಗಿದ್ದು, ಗಗನ್‌ದೀಪ್ ಸಾಹಿತ್ಯ ಬರೆದಿದ್ದಾರೆ. ವೀನಸ್ ಓರಿಜಿನಲ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ʻದಿಲ್ ಜಾನಿಯಾʼ ಸಾಂಗ್ ರಿಲೀಸ್ ಆಗಿದೆ. ಒಟ್ಟಿನಲ್ಲಿ ಕುಂಭ ಮೇಳದಲ್ಲಿ ತನ್ನ ಕಣ್ಣುಗಳಿಂದಲೇ ಸೆಳೆಯುತ್ತಿದ್ದ ಮೊನಾಲಿಸಾ ತೆರೆಯ ಮೇಲೆ ಬಂದಿದ್ದು, ಆಕೆಯ ಫ್ಯಾನ್ಸ್‌ಗೆ ಸಖತ್ ಖುಷಿ ಕೊಟ್ಟಿದೆ.
ಅಷ್ಟೇ ಅಲ್ಲದೇ ಮೊನಾಲಿಸಾಗೆ ಬಾಲಿವುಡ್‌ನ ಬಿಗ್ ಸಿನಿಮಾವೊಂದರಲ್ಲೂ ಚಾನ್ಸ್ ಸಿಕ್ಕಿದೆ. ಕಳೆದ ಒಂದು ವರ್ಷದಿಂದ ಅವರು ʻದಿ ಮಣಿಪುರ ಡೈರಿʼ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಇನ್ನೂ ಶೂಟಿಂಗ್ ನಡೆಯುತ್ತಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಬಳಿಕ ಸಿನಿಮಾ ಬಿಡುಗಡೆಯ ದಿನಾಂಕ ಘೋಷಿಸಲಾಗುತ್ತದೆ ಎಂದು ಚಿತ್ರತಂಡ ಹೇಳಿದೆ.
