ಉದಯವಾಹಿನಿ, ಗಾಂಧಿನಗರ: 2036 ರ ಒಲಿಂಪಿಕ್ಸ್‌ ಕ್ರೀಡಾಕೂಟವನ್ನ ಭಾರತಕ್ಕೆ ತರುವ ಪ್ರಧಾನಿ ಮೋದಿ ಅವರ ದೃಷ್ಟಿಕೋನವನ್ನು ರಿಲಯನ್ಸ್‌ ಸಂಸ್ಥೆ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ಎಂದು ಹೇಳಿದರು. ರಾಜ್‌ಕೋಟ್‌ನಲ್ಲಿ ವೈಬ್ರಂಟ್ ಗುಜರಾತ್ ಪ್ರಾದೇಶಿಕ ಸಮ್ಮೇಳನದ ಭಾಗವಾಗಿ ಆಯೋಜಿಸಲಾಗಿರುವ ʻಕಚ್-ಸೌರಾಷ್ಟ್ರಕ್ಕಾಗಿ ವೈಬ್ರಂಟ್ ಗುಜರಾತ್ ಪ್ರಾದೇಶಿಕ ವ್ಯಾಪಾರ ಪ್ರದರ್ಶನʼವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಇದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಕೇಶ್‌ ಅಂಬಾನಿ ಅವರು, ಪ್ರಧಾನಿಗಳ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು. ಭಾರತಕ್ಕೆ ಒಲಿಂಪಿಕ್ಸ್‌ ಕ್ರೀಡಾಕೂಟ ತರುವ ಮೋದಿ ಅವರ ದೃಷ್ಟಿಕೋನವನ್ನ ರಿಲಯಲ್ಸ್‌ ಸಂಸ್ಥೆ ಸಂಪೂರ್ಣವಾಗಿ ಬೆಂಬಲಿಸುತ್ತದೆ. ಇದು ದೇಶದಲ್ಲಿರುವ ಜಾಗತೀಕ ಕ್ರೀಡಾ ಮಹತ್ವಾಕಾಂಕ್ಷಿಗಳಿಗೂ ದೊಡ್ಡ ವೇದಿಕೆಯಾಗಲಿದೆ ಎಂದು ಶ್ಲಾಘಿಸಿದರು.

ಅಲ್ಲದೇ ಗುಜರಾತ್‌ ಶೃಂಗ ಸಮ್ಮೇಳನದಲ್ಲಿ ಮೋದಿ ಅವರು ಪಾಲ್ಗೊಂಡಿದ್ದಕ್ಕೆ ವೈಯಕ್ತಿಕವಾಗಿ ಅಭಿನಂದಿಸುತ್ತೇನೆ. ಇದು ಸೌರಾಷ್ಟ್ರ ಮತ್ತು ಕಚ್ ಜನರಿಗೆ ಸಿಕ್ಕ ದೊಡ್ಡ ಗೌರವವೂ ಹೌದು. ಪ್ರಧಾನಿ ಅವರ ಉಪಸ್ಥಿತಿಯು ಈ ಪ್ರದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಯ ಬಗ್ಗೆ ಅವರಿಗೆ ಇರುವ ಬದ್ಧತೆಯನ್ನು ಸೂಚಿಸುತ್ತದೆ ಎಂದು ಬಣ್ಣಿಸಿದರು. ವಿಶ್ವದ ಸುಮಾರು ರಾಷ್ಟ್ರಗಳು ಪಾಲ್ಗೊಳ್ಳುವ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸುವುದು ಸುಲಭದ ಕೆಲಸವಲ್ಲ. 45 ರಾಷ್ಟ್ರಗಳು ಪಾಲ್ಗೊಳ್ಳುವ ಏಷ್ಯಾಡ್, 56 ದೇಶಗಳು ಅಂಗಳಕ್ಕಿಳಿಯುವ ಕಾಮನ್‌ವೆಲ್ತ್, 10 ರಾಷ್ಟ್ರಗಳು ಆಡುವ ವಿಶ್ವಕಪ್ ಟೂರ್ನಿಗಿಂತ ಒಲಿಂಪಿಕ್ಸ್‌ ಕೂಟಕ್ಕೆ ಜವಾಬ್ದಾರಿ ಹೆಚ್ಚಾಗಿರುತ್ತದೆ. ಅದಕ್ಕೆ ತಕ್ಕಂತೆ ಲಕ್ಷಕೋಟಿಗಟ್ಟಲೆ ವೆಚ್ಚವನ್ನೂ ಮಾಡಬೇಕಾಗುತ್ತದೆ. ಈ ಜಾಗತಿಕ ಕ್ರೀಡಾ ಹಬ್ಬವು ವಾಸ್ತವವಾಗಿ ಶತಕೋಟಿ ಡಾಲರ್‌ಗಳ ವಿಷಯ. ಸ್ಥಳ, ಮಾನವ ಸಂಪನ್ಮೂಲ, ಮೂಲಸೌಕರ್ಯ ಮತ್ತು ಮನರಂಜನೆ ಸೇರಿದಂತೆ ಎಲ್ಲಾ ಸೌಲಭ್ಯಗಳೂ ಅಚ್ಚುಕಟ್ಟಾಗಿದ್ದರಷ್ಟೇ ಯಶಸ್ವಿಯಾಗಿ ಆಯೋಜನೆ ಮಾಡಲು ಸಾಧ್ಯ. ಇದಕ್ಕಾಗಿ ಆತಿಥೇಯ ದೇಶವು ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (ಐಒಸಿ) ಜತೆ ಒಪ್ಪಂದ ಮಾಡಿಕೊಳ್ಳಬೇಕು. ಆಯೋಜನೆಯ ಪೈಪೋಟಿ ವೇಳೆ ಅತಿಹೆಚ್ಚು ಬಿಡ್ ಮಾಡುವ ರಾಷ್ಟ್ರಕ್ಕೆ ಒಲಿಂಪಿಕ್ಸ್‌ ಆತಿಥ್ಯದ ಅವಕಾಶ ಲಭಿಸುತ್ತದೆ.

Leave a Reply

Your email address will not be published. Required fields are marked *

error: Content is protected !!