ಉದಯವಾಹಿನಿ, ಮಾಂಟೆವಿಡಿಯೊ: ಕಳೆದ 10 ದಿನಗಳಲ್ಲಿ ಪೂರ್ವ ಉರುಗ್ವೆಯ ಕರಾವಳಿಯಲ್ಲಿ ಸುಮಾರು 2,000 ಪೆಂಗ್ವಿನ್‍ಗಳು ಸಾವನ್ನಪ್ಪಿವೆ. ಪೆಂಗ್ವಿನ್‍ಗಳ ಸಾವಿಗೆ ಏವಿಯನ್ ಇನ್‍ಫ್ಲುಯೆಂಜಾ ಕಾರಣ ಇರಬಹುದು ಎಂದು ಶಂಕಿಸಲಾಗಿದೆ.
ಮೆಗೆಲ್ಲೆನಿಕ್ ಪೆಂಗ್ವಿನ್‍ಗಳು ಅಟ್ಲಾಂಟಿಕ್ ಸಾಗರದಲ್ಲಿ ಸತ್ತಿದ್ದು ಪ್ರವಾಹದಿಂದ ಉರುಗ್ವೆಯ ತೀರಕ್ಕೆ ಒಯ್ಯಲ್ಪಟ್ಟವು ಎಂದು ಪರಿಸರ ಸಚಿವಾಲಯದ ಪ್ರಾಣಿಗಳ ವಿಭಾಗದ ಮುಖ್ಯಸ್ಥ ಕಾರ್ಮೆನ್ ಲೀಜಾಗೊಯೆನ್ ಹೇಳಿದ್ದಾರೆ. ಮೆಗೆಲ್ಲೆನಿಕ್ ಪೆಂಗ್ವಿನ್‍ಗಳು ದಕ್ಷಿಣ ಅರ್ಜೆಂಟೀನಾದಲ್ಲಿ ಗೂಡುಕಟ್ಟುತ್ತವೆ. ದಕ್ಷಿಣ ಗೋಳಾರ್ಧದ ಚಳಿಗಾಲದಲ್ಲಿ ಆಹಾರ ಮತ್ತು ಬೆಚ್ಚಗಿನ ನೀರಿನ ಹುಡುಕಾಟದಲ್ಲಿ ಉತ್ತರಕ್ಕೆ ವಲಸೆ ಹೋಗುತ್ತವೆ. ಬ್ರೆಜಿಲಿಯನ್ ರಾಜ್ಯದ ಎಸ್ಪಿರಿಟೊ ಸ್ಯಾಂಟೋ ಕರಾವಳಿಯನ್ನು ಸಹ ತಲುಪುಬಲ್ಲವು.
ಈ ಸಂದರ್ಭದಲ್ಲಿಕೆಲವು ಪೆಂಗ್ವಿನ್‍ಗಳು ಸಾಯುವುದು ಸಹಜ ಆದರೆ, ಈ ಮಟ್ಟದಲ್ಲಿ ಪೆಂಗ್ವಿನ್‍ಗಳು ಸಾವನ್ನಪ್ಪುವುದು ಇದುವರೆಗೂ ಕಂಡುಬಂದಿಲ್ಲ. ಕಳೆದ ವರ್ಷ ಬ್ರೆಜಿಲ್‍ನಲ್ಲೂ ಸಾಕಷ್ಟು ಪೆಂಗ್ವಿನ್‍ಗಳು ಸಾವನ್ನಪ್ಪಿದ್ದವು ಎನ್ನುವುದನ್ನು ಅವರು ಸ್ಮರಿಸಿಕೊಂಡಿದ್ದಾರೆ.ಲಗುನಾ ಡಿ ರೋಚಾ ಸಂರಕ್ಷಿತ ಪ್ರದೇಶದ ನಿರ್ದೇಶಕ ಹೆಕ್ಟರ್ ಕೇಮರಿಸ್ ಅವರು ಅಟ್ಲಾಂಟಿಕ್ ಕರಾವಳಿಯ ಆರು ಮೈಲುಗಳ (10 ಕಿಲೋಮೀಟರ್) ಉದ್ದಕ್ಕೂ 500 ಕ್ಕೂ ಹೆಚ್ಚು ಸತ್ತ ಪೆಂಗ್ವಿನ್‍ಗಳನ್ನು ಎಣಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಿತಿಮೀರಿದ ಮೀನುಗಾರಿಕೆ ಮತ್ತು ಅಕ್ರಮ ಮೀನುಗಾರಿಕೆಯಿಂದಾಗಿ ಮೆಗೆಲ್ಲೆನಿಕ್ ಪೆಂಗ್ವಿನ್ ಸಾವಿನ ಹೆಚ್ಚಳಕ್ಕೆ ಕಾರಣವೆಂದು ಅವರು ಹೇಳುತ್ತಾರೆ. ಜುಲೈ ಮಧ್ಯದಲ್ಲಿ ಆಗ್ನೇಯ ಬ್ರೆಜಿಲ್‍ಗೆ ಅಪ್ಪಳಿಸಿದ ಅಟ್ಲಾಂಟಿಕ್‍ನಲ್ಲಿನ ಉಪೋಷ್ಣವಲಯದ ಚಂಡಮಾರುತವು ಬಹುಶಃ ಪ್ರತಿಕೂಲ ಹವಾಮಾನದಿಂದ ದುರ್ಬಲ ಪ್ರಾಣಿಗಳು ಸಾಯಲು ಕಾರಣವಾಗಬಹುದು ಎಂದು ಅವರು ಹೇಳಿದರು.
