ಉದಯವಾಹಿನಿ, ಬೆಂಗಳೂರು: ಕೆಂಪು ಸುಂದರಿ ತರಕಾರಿಗಳ ರಾಜ ಎಂದೆ ಕರೆಸಿಕೊಳ್ಳುತ್ತಿರುವ ಟೊಮಾಟೋ ಬೆಲೆ ಸದ್ಯಕ್ಕೆ ಇಳಿಕೆಯಾಗುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. ಈ ನಡುವೆ ಹಸಿಮೆಣಸಿನ ಕಾಯಿ, ಹಸಿಶುಂಠಿ, ಬೆಳ್ಳುಳ್ಳಿ ಬೆಲೆ ಶತಕ ಬಾರಿಸಿ ಮುನ್ನುಗ್ಗುತ್ತಲೇ ಇದ್ದು ಗ್ರಾಹಕರ ಜೇಬನ್ನು ಮತ್ತಷ್ಟು ಸುಡುತ್ತಿದೆ.
ರಾಜ್ಯದ ವಿವಿಧೆಡೆ ಪ್ರಾರಂಭದಲ್ಲಿ ಸುರಿದ ಮಳೆಯಿಂದ ಬೆಳೆ ನಾಶ ಹಾಗೂ ರೋಗ ಬಾಧೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಟೊಮಾಟೋ ಇಳುವರಿ ಬಂದಿಲ್ಲ.
ಜೊತೆಗೆ ನೆರರಾಜ್ಯಗಳಾದ ಆಂಧ್ರ, ತಮಿಳುನಾಡು,
ಮಹಾರಾಷ್ಟ್ರದಲ್ಲೂ ಸಹ ಬೆಳೆ ಸಮಯಕ್ಕೆ ಸರಿಯಾಗಿ ಹಾಗೂ ಮಳೆಯಿಂದ ಬೆಳೆ ಬಾರದ ಹಿನ್ನೆಲೆಯಲ್ಲಿ ರಾಜ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ಹೊರರಾಜ್ಯಗಳಿಗೆ ಟೊಮಾಟೋ ರಫ್ತಾಗುತ್ತಿದೆ. ಏಷ್ಯಾದಲ್ಲೇ ಅತಿ ದೊಡ್ಡ ಮಾರುಕಟ್ಟೆಯಾದ ಕೋಲಾರ ಎಪಿಎಂಸಿ ಮಾರುಕಟ್ಟೆಯಿಂದ ಪ್ರತಿನಿತ್ಯ ಸಾವಿರಾರು ಟನ್ ಟೊಮಾಟೋ ರಫ್ತಾಗುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಕಳೆದ 20 ದಿನಗಳಿಂದ ಕೆಜಿಗೆ 100ರಿಂದ 150 ಆಜುಬಾಜಿನಲ್ಲಿ ಗುಣಮಟ್ಟದ ಟೊಮಾಟೋ ಮಾರಾಟವಾಗುತ್ತಿದೆ. ಇದರ ಜೊತೆಗೆ ಶುಂಠಿ ದ್ವಿಶತಕ ಬಾರಿಸಿದೆ. ಕಳೆದ ವರ್ಷ ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ರೈತರು ಈ ಬಾರಿ ಶುಂಠಿ ಬೆಲೆಯನ್ನು ಹಿಂದೇಟು ಹಾಕಿದ್ದರಿಂದ ಬೆಲೆ ಹೆಚ್ಚಾಗಿದೆ.
