ಉದಯವಾಹಿನಿ, ಜೈಪುರ : ಇತ್ತೀಚೆಗೆ ವಾಹನ ಚಾಲನೆ ಮಾಡುವಾಗ ನಿಯಮಗಳನ್ನು ಉಲ್ಲಂಘನೆ ಮಾಡುವ ಸಂಖ್ಯೆ ಹೆಚ್ಚಾಗುತ್ತಿದೆ. ಸಾರಿಗೆ ಇಲಾಖೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಸೀಟ್ ಬೆಲ್ಟ್ ಹಾಕದಿರುವುದು, ಫೋನ್ ಬಳಸುವುದು, ಅತಿಯಾದ ವೇಗ, ಡ್ರಂಕ್ ಆ್ಯಂಡ್‌ ಡ್ರೈವ್ ಇತ್ಯಾದಿ ನಿಯಮ ಉಲ್ಲಂಘನೆ ಮಾಡುವವರು ಇದ್ದಾರೆ. 16 ಆಸನಗಳ ಜೀಪ್‌ನಲ್ಲಿ ಪ್ರಯಾಣಿಸುವ ಮೂಲಕ 60 ಪ್ರಯಾಣಿಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿರುವ ವಿಡಿಯೊ ವೈರಲ್  ಆಗಿದೆ. ರಾಜಸ್ಥಾನದ ಬನ್‌ಸ್ವಾರ ಜಿಲ್ಲೆಯಲ್ಲಿ ಈ ದೃಶ್ಯ ಕಂಡು ಬಂದಿದೆ. ಕೇವಲ 16 ಜನರಿಗೆ ಕೂರಲು ವ್ಯವಸ್ಥೆ ಇರುವ ಸಣ್ಣ ಜೀಪ್‌ನಲ್ಲಿ 60 ಮಂದಿ ಪ್ರಯಾಣಿಸಿದ್ದು, ಹಲವರು ಈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಆನಂದಪುರಿ ಪ್ರದೇಶದಲ್ಲಿ ಈ ದೃಶ್ಯ ಕಂಡುಬಂದಿದ್ದು, ಜೀಪಿನ ಒಳಭಾಗ ಮಾತ್ರವಲ್ಲದೆ ಬಾನೆಟ್, ಛಾವಣಿ ಮತ್ತು ಬಾಗಿಲಲ್ಲಿ ಪ್ರಯಾಣಿಕರು ನೇತಾಡುತ್ತಿರುವುದು ಕಂಡು ಬಂದಿದೆ. ಜೀಪಿನಲ್ಲಿ ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಕೂಡ ಪ್ರಯಾಣಿಸಿದ್ದಾರೆ. ಅಷ್ಟೇ ಅಲ್ಲದೆ ಈ ಜೀಪ್‌ ಅತೀ ವೇಗವಾಗಿ ಸಾಗಿದ್ದು ಸ್ವಲ್ಪ ಎಚ್ಚರ ತಪ್ಪಿದ್ದರೂ ದೊಡ್ಡ ಅಪಾಯ ಉಂಟಾಗುವ ಸಾಧ್ಯತೆ ಇತ್ತು.

Leave a Reply

Your email address will not be published. Required fields are marked *

error: Content is protected !!