ಉದಯವಾಹಿನಿ, ಬೆಂಗಳೂರು: ಕುಮಾರಸ್ವಾಮಿ ಎರಡು ಬಾರಿ ಲೀಸ್ ಬೇಸ್‌ನಲ್ಲಿ ಸಿಎಂ ಆಗಿದ್ದರು ಎಂದು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಸಿದ್ದರಾಮಯ್ಯನವರನ್ನು ಸಮರ್ಥಿಸಿ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಲೀಸ್ ಬೇಸ್ ಸಿಎಂ ಎಂಬ ಕುಮಾರಸ್ವಾಮಿ ಟೀಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಲೀಸ್ ಬೇಸ್ ಸಿಎಂ ಆದರೆ ಕುಮಾರಸ್ವಾಮಿ ಏನು?ಕುಮಾರಸ್ವಾಮಿ 2 ಬಾರಿ ಸಿಎಂ ಆಗಿದ್ದರು. ಅವರು ಲೀಸ್ ಬೇಸ್ ಮೇಲೆ ಆಗಿದ್ದರು ತಾನೇ. ಸುಮ್ಮನೆ ಟೀಕೆ ಮಾಡಲು ಮಾತಾನಾಡುವುದು ಬೇಡ. ಕುಮಾರಸ್ವಾಮಿ ಯಾವತ್ತು 113 ತೆಗೆದುಕೊಂಡು ಸಿಎಂ ಆಗಿಲ್ಲ. 42 ಸ್ಥಾನ ತೆಗೆದುಕೊಂಡು ಸಿಎಂ ಆದವರು. ಸಿದ್ದರಾಮಯ್ಯ ಆದರೂ 136 ಸ್ಥಾನ ಗೆದ್ದು ಸಿಎಂ ಆಗಿದ್ದಾರೆ. ಕುಮಾರಸ್ವಾಮಿ ರಾಜಕೀಯಕ್ಕೆ ಹಾಗೆ ಮಾತನಾಡುವುದು ಅವರ ಘನತೆಗೆ ಸರಿಯಲ್ಲ ಎಂದು ಕಿಡಿಕಾರಿದರು. ಇದೇ ವೇಳೆ ಕುಮಾರಸ್ವಾಮಿ ರಾಜ್ಯ ರಾಜಕೀಯಕ್ಕೆ ಬರುವುದಾದರೆ ಸ್ವಾಗತ ಎಂದರು.
ಮಾಜಿ ಸಚಿವ ರೇವಣ್ಣ ನನ್ನ ಕ್ಷೇತ್ರಕ್ಕೆ ಬರುವುದಾದರೆ ಸ್ವಾಗತ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ರೇವಣ್ಣ ನನ್ನ ಕ್ಷೇತ್ರಕ್ಕೆ ಬಂದರೆ ಸ್ವಾಗತ ಎಂದರು.
ನಾಯಕತ್ವ ಗೊಂದಲ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾಯಕತ್ವ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ಹೈಕಮಾಂಡ್ ಈ ವಿಚಾರದ ಬಗ್ಗೆ ತೀರ್ಮಾನ ಮಾಡಲಿದೆ. ಯಾರೋ ಎರಡು ಜನ ಶಾಸಕರು ಮಾತನಾಡುತ್ತಾರೆ ಎಂದು ಮಾತಾಡಬೇಡಿ. ನೀವು ಅದರ ಬಗ್ಗೆ ಮಾತಾಡೋದು ಬಿಡಿ. ನಾಯಕತ್ವದ ಬಗ್ಗೆ ಮಾಧ್ಯಮಗಳು ಮಾತನಾಡುವುದು ನಿಲ್ಲಿಸಿ ಎಂದರು.
