ಉದಯವಾಹಿನಿ, ಅಮರಾವತಿ (ಆಂಧ್ರ ಪ್ರದೇಶ): ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಸ್ನೇಹಿ ಅಭ್ಯಾಸಗಳ ಮೇಲೆ ಗಮನ ಹರಿಸಿದ ಈ ಮಹಿಳೆಯರು ಇಂದು ತಮ್ಮ ಈ ಕಲೆಯ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಸಣ್ಣ ಸಾಲ ಮತ್ತು ದೊಡ್ಡ ಸಮರ್ಪಣೆಯೊಂದಿಗೆ ಆರಂಭಿಸಿದ ಕೆಲಸ ಇಂದು ಯಶಸ್ವಿ ಉದ್ಯಮವಾಗಿ ಮಾರ್ಪಟ್ಟಿದ್ದು, ಲಕ್ಷಾಂತರ ರೂಪಾಯಿ ವಹಿವಾಟ ನಡೆಸಿದ್ದಾರೆ. ಗುಂಟೂರು ಸರ್ಸಾ ರಾಷ್ಟ್ರೀಯ ಮೇಳದಲ್ಲಿ ಪ್ರದರ್ಶಿತವಾದ ಈ ಮಹಿಳೆಯರ ಪ್ರಯಾಣ ಕೇವಲ ಸ್ಪೂರ್ತಿದಾಯಕ ಮಾತ್ರವಲ್ಲ. ಅವರ ಆತ್ಮವಿಶ್ವಾಸ ಮತ್ತು ಬದ್ಧತೆಯು ಅದೃಷ್ಟವನ್ನೇ ಬದಲಾಯಿಸಿದೆ.
ಅಜ್ಜಿಯ ಸ್ಪೂರ್ತಿ: ಕೋನಸೀಮಾ ಜಿಲ್ಲೆಯ ರಾಜೊಲು ತಾಲೂಕಿನಲ್ಲಿನ ಚಿಂತಪಲ್ಲಿ ಗ್ರಾಮದ ಮೂಲದಿಂದ ಬಂದ ನಾನು ಹೈದರಾಬಾದ್ನ ನಿಫ್ಟ್ನಲ್ಲಿ ಫ್ಯಾಷನ್ ಟೆಕ್ನಾಲಜಿಯನ್ನು ಅಭ್ಯಾಸ ಮಾಡಿ ಬಳಿಕ ವಿನ್ಯಾಸಕಿಯಾದೆ. ಆದರೆ, ನಮ್ಮ ಮನಸು ಮಾತ್ರ ಸದಾ ಮಕ್ಕಳಿಗೆ ಪರಿಸರ ಸ್ನೇಹಿ ಮರದ ಆಟಿಕೆ ತಯಾರಿಕೆಯತ್ತ ಸೆಳೆಯುತ್ತಿತ್ತು ಎಂದು ಉದ್ಯಮಿ ಕಡಲಿ ವಿಘ್ನೇಶ್ವರಿ ತಿಳಿಸಿದರು.
ನನ್ನ ಅಜ್ಜಿ ಸಾಂಪ್ರದಾಯಿಕ ಆಟಿಕೆಗಳನ್ನು ಮಾಡುತ್ತಿದ್ದರು. ಅದರಿಂದ ನಾನು ಕೂಡ ಪ್ರೇರಣೆ ಪಡೆದೆ. ಜೊತೆಗೆ ಸರ್ಕಾರದ ಬೆಂಬಲವೂ ಸಿಕ್ಕಿತು. ಇದರಿಂದಾಗಿ ನಾನು ಬೇವು ಮತ್ತು ದೇವದಾರ ಮರದಲ್ಲಿ ಮಕ್ಕಳ ಹಲ್ಲು ಬರುವ ಸಮಯದಲ್ಲಿ ಕಡಿಯಲು ಸುರಕ್ಷಿತವಾಗುವ ಆಟಿಕೆಗಳನ್ನು ತಯಾರಿಸಲು ಆರಂಭಿಸಿದೆ. ಆಟಿಕೆಗಳಲ್ಲಿ ಬುಗರಿ, ವಿಜಲ್, ರಾಜ ಮತ್ತು ರಾಣಿ ಹಾಗೂ ಕರ್ನಾಟಕ, ತೆಲುಗು ಮತ್ತು ತಮಿಳುನಾಡು ಸಂಸ್ಕೃತಿ ಬಿಂಬಿಸುವ ಆಟಿಕೆಗಳು ತಮ್ಮ ಬಳಿ ಇವೆ ಎಂದರು.
ನನ್ನ ಓರಗಿತ್ತಿಯಿಂದ 30 ಸಾವಿರ ಸಾಲ ಪಡೆದು ನಾನು ಈ ಉದ್ಯಮ ಪ್ರಾರಂಭಿಸಿದ್ದು, ಇಂದು ಐದು ಜನರಿಗೆ ಉದ್ಯೋಗ ನೀಡಿದ್ದೇನೆ. ಯಾರು ಕೊಳ್ಳುತ್ತಾರೆ ಈ ಮರದ ಆಟಿಕೆಗಳನ್ನು ಎಂದು ಮೂದಲಿಸಿ ನಕ್ಕವರೇ ಇಂದು ನನಗೆ ಪ್ರಶಂಸೆ ಮಾಡುತ್ತಿದ್ದಾರೆ ಎನ್ನುತ್ತಾರೆ. ಇವರ ಈ ಯಶಸ್ಸಿನ ಕುರಿತು ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಕೂಡ ಪೋಸ್ಟ್ ಮಾಡಿದ್ದು ಇವರ ಬಗ್ಗೆ ಮೆಚ್ಚುಗೆ ಸಹ ಸೂಚಿಸಿದ್ದರು.
