ಉದಯವಾಹಿನಿ, ಟಾಕ್ಸಿಕ್’ ಟೀಸರ್ ರಿಲೀಸ್ ಮಾಡುವ ಮೂಲಕ ದೇಶಾದ್ಯಂತ ಹವಾ ಎಬ್ಬಿಸಿರುವ ರಾಕಿಭಾಯ್ ಯಶ್ ಮುಂಬೈ ಏರ್‌ಪೋರ್ಟ್‌ನಲ್ಲಿ ಪ್ರತ್ಯಕ್ಷವಾಗಿದ್ದಾರೆ.ಮುಖಕ್ಕೆ ಮಾಸ್ಕ್ ಧರಿಸಿ ಕಾರ್ ಹತ್ತುವ ವೇಳೆ ಕ್ಯಾಮೆರಾದಲ್ಲಿ ಸೆರೆಯಾದ್ರು ಯಶ್. ಪಾಪರಾಜಿಗಳ ಕ್ಯಾಮೆರಾಗೆ ಸೆರೆಯಾದ ಯಶ್, ಕೆಲ ಕ್ಷಣ ನಿಂತು ಪೋಸ್ ಕೊಟ್ಟಿದ್ದಾರೆ. ಬಳಿಕ ಗೌರವದಿಂದ ಕೈಮುಗಿದು ಕಾರ್ ಹತ್ತಿದ್ದಾರೆ.
ಟಾಕ್ಸಿಕ್’ ಟೀಸರ್‍ಗೆ ಪರ ವಿರೋಧದ ಅಲೆ ಎದ್ದಿದೆ. ಇತ್ತೀಚೆಗೆ ಯಶ್ ಎಲ್ಲಿಯೂ ಕಾಣಿಸ್ಕೊಂಡಿರಲಿಲ್ಲ. ಬಹಳ ದಿನದ ಬಳಿಕ ಕಾಣಿಸ್ಕೊಂಡ ಯಶ್ ಮುಂಬೈನಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾದ್ರು. ಇನ್ನೂ ಟಾಕ್ಸಿಕ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ ಇರುವ ಅವರು ಮುಂಬೈನಲ್ಲೇ ಕೆಲ ತಿಂಗಳಿಂದ ಬೀಡು ಬಿಟ್ಟಿದ್ದಾರೆ. ದೇಶ ವಿದೇಶದಲ್ಲಿ ನಡೆಯುತ್ತಿರುವ ಟಾಕ್ಸಿಕ್ ಪೋಸ್ಟ್ ಪ್ರೊಡಕ್ಷನ್ ಔಟ್‍ಪುಟ್ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಹೀಗೆ ಗುಪ್ತ ಸ್ಥಳದಲ್ಲಿರುವ ಯಶ್ ಕ್ಯಾಮೆರಾ ಮುಂದೆ ಕಾಣಿಸ್ಕೊಂಡಿರೋದು ವಿಶೇಷ.
