ಉದಯವಾಹಿನಿ, ಭಾರತದ ಮಾಜಿ ಕ್ರಿಕೆಟಿಗ ಶಿಖರ್ ಧವನ್ ಮದ್ವೆ ತಯಾರಿ ನಡೆಸಿದ್ದಾರೆ. ಇದೇ ವರ್ಷ ಫೆಬ್ರವರಿಯಲ್ಲಿ ಮದ್ವೆ ಮಾಡಿಕೊಳ್ಳಲಿದ್ದಾರೆ ಎನ್ನುವ ವದಂತಿಗಳು ಹಬ್ಬಿದ್ದವು. ಯಾರ ಜೊತೆ ವಿವಾಹವಾಗುತ್ತಾರೆ ಎನ್ನುವ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದೆ. ಐರಿಶ್ ಮೂಲದ ಸೋಫಿ ಶೈನ್ ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ಧವನ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಈ ಮೊದ್ಲು ಆಸ್ಟ್ರೇಲಿಯಾ ಮೂಲದ ಆಯೇಷಾ ಮುಖರ್ಜಿ ಜೊತೆಗೆ ಮದ್ವೆಯಾಗಿದ್ದ ಧವನ್ 2023ರಲ್ಲಿ ಅವರಿಂದ ವಿಚ್ಚೇದನ ಪಡೆದಿದ್ದರು.
ಶಿಖರ್ ಮತ್ತು ಸೂಫಿ ಕಳೆದ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಆ ಸ್ನೇಹ ಪ್ರೀತಿಗೆ ತಿರುಗಿ ಈಗ ಹಸೆಮಣೆ ಏರುವ ಹಂತಕ್ಕೆ ತಲುಪಿದೆ. ಅಂದಹಾಗೆ ಸೋಫಿ, ಶಿಖರ್ ಧವನ್ ಫೌಂಡೇಶನ್‌ನ ಮುಖ್ಯಸ್ಥರೂ ಆಗಿದ್ದಾರೆ.
