ಉದಯವಾಹಿನಿ, ಬೆಂಗಳೂರು: ಬಿಜೆಪಿಯವರು ನಕಲಿ ರಾಮನ ಭಕ್ತರು. ಓಟಿಗೋಸ್ಕರ, ಚುನಾವಣೆಗೋಸ್ಕರ ರಾಮ ಅಂತಾರೆ. ಕಾಂಗ್ರೆಸ್‌ನವರು ನಿಜವಾದ ರಾಮನ ಭಕ್ತರು ಎಂದು ಬಿಜೆಪಿ ವಿರುದ್ದ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.ನರೇಗಾ ಹೆಸರು ಬದಲಾವಣೆ ಮಾಡಿರುವ ಕೇಂದ್ರದ ನಿರ್ಧಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ನರೇಗಾ, ಗಾಂಧೀಜಿ ಹೆಸರು ಬದಲಾವಣೆ ಮಾಡಿದೆ. ಮೊದಲು ಕೇಂದ್ರವೇ 100% ಹಣ ನೀಡುತ್ತಿತ್ತು.
ಈಗ 40% ಹಣ ರಾಜ್ಯ ಕೊಡಬೇಕು. ಹೊಸ ಕಾಯ್ದೆಯಲ್ಲಿ ಕೇಂದ್ರ ಸರ್ಕಾರ ಹೇಳಿದ ಕಡೆ ಮಾತ್ರ ಕೆಲಸ ಮಾಡಬೇಕು. ಹೊಸ ಕಾಯ್ದೆಯಿಂದ ಉದ್ಯೋಗ ಖಾತ್ರಿ ಎನ್ನುವುದು ಹೋಯ್ತು. ಕೇಂದ್ರ ಸರ್ಕಾರ ಬಡವರಿಗೆ ದ್ರೋಹ ಮಾಡುತ್ತಿದೆ. ಜಿ ರಾಮ್ ಜೀ ಎಂದು ಹೆಸರನ್ನು ಇಟ್ಟಿದ್ದಾರೆ ನರೇಗಾ ಬದಲಾವಣೆ ಮಾಡಿರುವುದು ಬಡ ಜನರಿಗೆ ಮಾಡಿದ ದ್ರೋಹ ಎಂದು ಕಿಡಿಕಾರಿದರು. ಕಾಂಗ್ರೆಸ್ ಅವರಿಗೆ ರಾಮನನ್ನು ಕಂಡರೆ ಆಗುವುದಿಲ್ಲ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಕಿಡಿಕಾರಿದ ಅವರು, ಬಿಜೆಪಿ ಅವರು ನಕಲಿ ರಾಮನ ಭಕ್ತರು. ವೋಟಿಗಾಗಿ ರಾಮ ಎನ್ನುತ್ತಾರೆ. ಎಲ್ಲಾ ದೇವಸ್ಥಾನ ಕಟ್ಟಿದ್ದು ನಾವೇ ನಿಜವಾದ ರಾಮನ ಭಕ್ತರು.
