ಉದಯವಾಹಿನಿ, ಕಠಿಣ ಕ್ಷಣದಲ್ಲಿ ಸಮಾಧಾನದಿಂದ ಆಡಿದ ಭಾರತದ ಅನುಭವಿ ಜೋಡಿಗಳು ಪಂದ್ಯವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡು, ಅದ್ಭುತವಾದ ಆಟ ಪ್ರದರ್ಶನ ಮಾಡುವ ಮೂಲಕ ಐಟಿಎಫ್ ಡಬ್ಲ್ಯೂ35 ಮಹಿಳಾ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್‌ ನ ಫೈನಲ್ ಪಂದ್ಯಕ್ಕೆ ಲಗ್ಗೆಯಿಟ್ಟಿವೆ.
ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದ ಲಾನ್ ಟೆನಿಸ್ ಅಂಗಣದಲ್ಲಿ ನಡೆದ ಐಟಿಎಫ್ ಮಹಿಳಾ ಓಪನ್ ಟೆನಿಸ್ ಟೂರ್ನಿಯ ಕೋರ್ಟ್ 2ರಲ್ಲಿ ನಡೆದ ವುಮೆನ್ಸ್ ಡಬಲ್ ಪಂದ್ಯದಲ್ಲಿ ಭಾರತದ ವೈಷ್ಣವಿ ಅಡ್ಕರ್ ಮತ್ತು ಅಂಕಿತಾ ರೈನಾ ಜೋಡಿ ಮಹತ್ವದ ಕ್ಷಣಗಳಲ್ಲಿ ಧೈರ್ಯ ಕಳೆದುಕೊಳ್ಳದೆ ಟೈಬ್ರೇಕ್‌ನಲ್ಲಿ ಒಂದನೇ ಸೆಟ್ ತಮ್ಮದಾಗಿಸಿಕೊಂಡರು. ಅನಂತರ 2ನೇ ಸೆಟ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದಿದ್ದ ಭಾರತದ ಸೋನಲ್ ಪಾಟೀಲ್ ಮತ್ತು ಬೇಲಾ ತಮ್ಹಂಕರ್ ಜೋಡಿಯನ್ನು ಅಂತಿಮವಾಗಿ 7-6, 6-2 ಅಂಕಗಳಿಂದ ಸೋಲಿಸಿ ಗಮನಾರ್ಹ ಜಯ ಸಾಧಿಸಿದರು.

Leave a Reply

Your email address will not be published. Required fields are marked *

error: Content is protected !!