ಉದಯವಾಹಿನಿ, ಟೆಹರಾನ್: ದೇಶದಲ್ಲಿ ನಡೆಯುತ್ತಿರುವ ಭಾರೀ ಪ್ರತಿಭಟನೆ ಮತ್ತು ಅಮೆರಿಕದ ಸುಂಕ ಸಮರದಿಂದ ಇರಾನ್ ಕರೆನ್ಸಿ ರಿಯಲ್ ಮೌಲ್ಯ ಭಾರೀ ಕುಸಿತಗೊಂಡಿದೆ. ಈಗ ಒಂದು ಅಮೆರಿಕನ್ ಡಾಲರ್ 10,92,500 ರಿಯಲ್‌ಗೆ ಸಮವಾಗಿದೆ.
ಟೆಹರಾನ್: ದೇಶದಲ್ಲಿ ನಡೆಯುತ್ತಿರುವ ಭಾರೀ ಪ್ರತಿಭಟನೆ ಮತ್ತು ಅಮೆರಿಕದ ಸುಂಕ ಸಮರದಿಂದ ಇರಾನ್ ಕರೆನ್ಸಿ ರಿಯಲ್ ಮೌಲ್ಯ ಭಾರೀ ಕುಸಿತಗೊಂಡಿದೆ. ಈಗ ಒಂದು ಅಮೆರಿಕನ್ ಡಾಲರ್ 10,92,500 ರಿಯಲ್‌ಗೆ ಸಮವಾಗಿದೆ.
ಇರಾನ್ ವಾರ್ಷಿಕ ಹಣದುಬ್ಬರ ದರವು ಡಿಸೆಂಬರ್‌ನಲ್ಲಿ ಶೇ. 42.2 ಕ್ಕೆ ಏರಿದೆ. ಹಣದುಬ್ಬರ ಏರಿಕೆಯಾಗಿದ್ದರೂ ಈ ವಿಚಾರವನ್ನು ಸರ್ಕಾರ ಬಹಿರಂಗ ಪಡಿಸದೇ ಮುಚ್ಚಿಟ್ಟಿತ್ತು. ಇದರಿಂದ ವಸ್ತುಗಳ ಬೆಲೆಗಳು ಮತ್ತಷ್ಟು ಏರಿಕೆಯಾಗಿವೆ.
ಇಸ್ರೇಲ್ ವಿರುದ್ಧ ಹೋರಾಟದಲ್ಲಿ ಹಮಾಸ್‌ಗೆ ಬೆಂಬಲ ನೀಡಿದ್ದಕ್ಕೆ ಇರಾನ್ ತೈಲ ಮಾರಾಟಕ್ಕೆ ಅಮೆರಿಕ ಕಠಿಣ ನಿರ್ಬಂಧ ಹೇರಿತ್ತು. ಇದರಿಂದಾಗಿ ಇರಾನ್ ಆರ್ಥಿಕತೆಗೆ ಮತ್ತಷ್ಟು ಪೆಟ್ಟು ಬಿದ್ದಿತ್ತು. ಟ್ರಂಪ್ ತೈಲ ರಫ್ತಿಗೆ ನಿರ್ಬಂಧ ಹೇರಿದ ಜೊತೆಗೆ ವಿದೇಶಿ ಕರೆನ್ಸಿಗೆ ಪ್ರವೇಶವನ್ನು ನಿರ್ಬಂಧಿಸಿದ್ದರು. ಇದರಿಂದಾಗಿ ಇರಾನ್ ಈಗ ಆರ್ಥಿಕ ಹಿಂಜರಿತದ ಬೆದರಿಕೆಯನ್ನು ಎದುರಿಸುತ್ತಿದೆ. 1979 ರ ಇರಾನ್ ಕ್ರಾಂತಿಯ ಸಮಯದಲ್ಲಿ ಒಂದು ಅಮೆರಿಕನ್ ಡಾಲರ್ 70 ಇರಾನ್ ರಿಯಾಲ್ ಮೌಲ್ಯವನ್ನು ಹೊಂದಿತ್ತು. ಆದರೆ 2026 ರ ಆರಂಭದ ವೇಳೆಗೆ ಅದು 1.4 ಮಿಲಿಯನ್ ರಿಯಾಲ್‌ಗಳನ್ನು ದಾಟಿದ್ದು ನಾಲ್ಕು ದಶಕಗಳಲ್ಲಿ ಇರಾನ್ ಕರೆನ್ಸಿ ಸುಮಾರು 20,000 ಪಟ್ಟು ಮೌಲ್ಯವನ್ನು ಕಳೆದುಕೊಂಡಿದೆ.
