ಉದಯವಾಹಿನಿ, ನವದೆಹಲಿ: ಇರಾನ್ನಲ್ಲಿ ಪ್ರತಿಭಟನೆಗಳು ಹಿಂಸಾತ್ಮಕವಾಗುತ್ತಿದ್ದು, ಈ ಬೆನ್ನಲ್ಲೇ ಅಮೆರಿಕ ಮತ್ತೊಮ್ಮೆ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ. ಅಮೆರಿಕದ ಸಹಾಯ ಯಾಚಿಸದೇ ತಕ್ಷಣಕ್ಕೆ ದೇಶ ತೊರೆಯುವ ಯೋಜನೆ ರೂಪಿಸಿ ತಕ್ಷಣ ಹೊರಡಿ ಎಂದು ಸೂಚನೆ ರವಾನಿಸಿದೆ. ಇಂದು ನೀಡಿರುವ ಸೂಚನೆಯಲ್ಲಿ ಇರಾನ್ ತನ್ನ ಪ್ರಜೆಗಳಿಗೆ ಯಾವ ಗಡಿ ಭಾಗಗಳು ತೆರೆದಿದೆ ಮತ್ತು ಇಲ್ಲ ಹಾಗೂ ಯಾವುದು ಅಪಾಯಕಾರಿ ಗಡಿ ಎಂಬ ಬಗ್ಗೆ ವಿವರವಾದ ಮಾಹಿತಿಯನ್ನು ಹಂಚಿಕೊಂಡಿದೆ.
ಜನವರಿ 14ರಂದು ಎರಡನೇ ಬಾರಿಗೆ ತನ್ನ ದೇಶದ ಪ್ರಜೆಗಳಿಗೆ ಇರಾನ್ ತೊರೆಯುವಂತೆ ಎಚ್ಚರಿಕೆ ನೀಡಿರುವ ಅಮೆರಿಕ ರಾಯಭಾರಿ ಕಚೇರಿ ಇರಾನ್ನಿಂದ ಭೂ ಮಾರ್ಗದ ಮೂಲಕ ಸುರಕ್ಷಿತ ಎನಿಸಿದರೆ ಟರ್ಕಿ ಅಥವಾ ಅರ್ಮೇನಿಯಾಗೆ ತೆರೆಳುವಂತೆ ತಿಳಿಸಿದೆ.
ಇರಾನ್ನಲ್ಲಿ ಹೆಚ್ಚುತ್ತಿರುವ ಪ್ರತಿಭಟನೆಗಳು ಹಿಂಸಾತ್ಮಕವಾಗುವ ಸಾಧ್ಯತೆ ಇದ್ದು, ಇದರಿಂದ ಜನರು ಗಾಯಗೊಳ್ಳಬಹುದು ಅಥವಾ ಬಂಧನಕ್ಕೆ ಒಳಗಾಗಬಹುದು. ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದ್ದು, ರಸ್ತೆಗಳು ಬಂದ್ ಆಗಿವೆ. ಸಾರಿಗೆ ವ್ಯವಸ್ಥೆಗೂ ಅಡಚಣೆ ಉಂಟಾಗಿದ್ದು, ಇಂಟರ್ನೆಟ್ ಬಂದ್ ಆಗಿದೆ. ಮೊಬೈಲ್, ಲ್ಯಾಂಡ್ಲೈನ್ ಮತ್ತು ದೇಶದಲ್ಲಿನ ಇಂಟರ್ನೆಟ್ ನೆಟ್ವರ್ಕ್ಗಳನ್ನು ಇರಾನ್ ಸರ್ಕಾರ ನಿರ್ಬಂಧಿಸಿದೆ.
ಈ ಗಡಿಗಳು ಮುಕ್ತ: ಟರ್ಕಿ;- ಗುರ್ಬುಲಾಕ್, ಕಪಿಕೋಯ್, ರಾಝಿ ಮತ್ತು ಎಸೆಂಡೆರೆ,ಸೆರೋ ಸೇರಿದಂತೆ ಇರಾನ್‌ನೊಂದಿಗಿನ ಮೂರು ಭೂ ಗಡಿಗಳು ತೆರೆದಿವೆ. ಇರಾನಿಯನ್ ಅಥವಾ ಟರ್ಕಿಶ್ ಪಾಸ್‌ಪೋರ್ಟ್ ಮೂಲಕ ಟರ್ಕಿಗೆ ಪ್ರವೇಶಿಸಿ.
