ಉದಯವಾಹಿನಿ, ಚಿಂಚೋಳಿ:-ವಿಶೇಷ ವರದಿ

ಮಹೇಬೂಬಶಾ ಅಣವಾರ
 ತಾಲೂಕಿನ ಕುಂಚಾವರಂ ವನ್ಯಜೀವಿ ಧಾಮದಲ್ಲಿ ಬರುವ ಒಂಟ್ಟಿಚಿಂತಾ ಸಂಗಾಪೂರ ಮಧ್ಯದಲ್ಲಿ ಬರುವ ಎತ್ತಿಪೋತ ಜಲಪಾತವು ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಎತ್ತಿಪೋತ ಜಲಪಾತವು ಮೈತುಂಬಿ ಹರಿಯುತ್ತದೆ ಇದನ್ನು ನೋಡಿ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಹರಿದು ಬರುತ್ತಿದೆ.
ಎತ್ತಿಪೋತ ಜಲಪಾತಕ್ಕೆ ನೀರು ಬರಲು ಮೇಲ್ಗಡೆ ಇರುವ ತೆಲಂಗಾಣ ರಾಜ್ಯದಲ್ಲಿ ಮಳೆಯಾದರೆ ಜಲಪಾತದ ನಾಲೆಗೆ ಮೈತುಂಬಿಕೊಂಡು ನೀರು ಹರಿಯುತ್ತದೆ ಇದನ್ನು ನೋಡಿ ಆನಂದಿಸಲು ನೇರೆಯ ತೆಲಂಗಾಣದ ತಾಂಡೂರ,ಜಹೀರಾಬಾದ,ಆಂದ್ರಪ್ರದೇಶ,ಹೈದರಾಬಾದ್ ಹಾಗೂ ಕರ್ನಾಟಕದ ಬೀದರ,ಕಲಬುರ್ಗಿ,ಯಾದಗಿರಿ,ರಾಯಚೂರು,ಮಹಾರಾಷ್ಟ್ರದಿಂದ ಮೊದಲಾದ ಕಡೆಯಿಂದ ಪ್ರವಾಸಿಗರು ಆಗಮಿಸಿ ಮೇಲಿಂದ ನೀರು ಬೀಳುವ ಸುಂದರವಾಗಿ ಕಾಣುವ ದೃಶ್ಯ ಪ್ರವಾಸಿಗರನ್ನು ನೋಡಿ ಆನಂದಿಸುತ್ತಾರೆ.
ಕರ್ನಾಟಕ ಹಾಗೂ ತೆಲಂಗಾಣ ಗಡಿಭಾಗ:- ಈ ವರ್ಷ ಮಳೆಗಾಲ ಜೂನ್ ಪ್ರಾರಂಭವಾಗಿ ತಿಂಗಳ ಕಳೆದರೂ ಎತ್ತಿಪೋತಕ್ಕೆ ನೀರು ಬಂದಿರುವುದಿಲ್ಲಾ ಆದರೆ ಜುಲೈ ತಿಂಗಳಲ್ಲಿ ಅತಿಯಾದ ಧಾರಾಕಾರವಾಗಿ ಕರ್ನಾಟಕ ಹಾಗೂ ತೆಲಂಗಾಣ ರಾಜ್ಯದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಎತ್ತಿಪೋತ ಜಲಪಾತವು ಮೈತುಂಬಿ ಹರಿಯುತ್ತಿದ್ದು ಪ್ರವಾಸಿಗರು ಅನೇಕ ಕಡೆಯಿಂದ ಆಗಮಿಸಿ ನಿಸರ್ಗದ ಸೌಂದರ್ಯ ನೋಡಿ ಪೋನ್ ಗಳಲ್ಲಿ ಪೋಟೋಗಳು ತೆಗೆದುಕೊಂಡು ಸಂತೋಷ ವ್ಯಕ್ತಪಡಿಸುತ್ತಾರೆ.
ಉತ್ತರ ಕರ್ನಾಟಕದಲ್ಲಿಯೇ ಅತ್ಯಂತ ಸುಂದರ ತಾಣ ರಮಣಿಯ ತಾಣ ಎತ್ತಿಪೋತ ಜಲಪಾತವಾಗಿದೆ,ಆಗುಂಬೆ ಐಹೊಳೆ ಪಟ್ಟದಕಲ್ಲು ನೋಡಲು ಹೋಗುವ ಮೊದಲು ಎತ್ತಿಪೋತ ಜಲಪಾತ ನೋಡಿದರೆ ಸ್ವರ್ಗಕ್ಕೆ ಹೋಗಿದ ಹಾಗೆ ಕಾಣುತ್ತದೆ. ಎತ್ತಿಪೋತ ನೋಡಲು ಬರುವ ಪ್ರವಾಸಿಗರು ನೀರಿನ ಸಮೀಪ ಹೋಗದಂತೆ ಪೋಟೋ ಶೂಟ್ ಮಾಡುವ ಸಂದರ್ಭ ಕಾಲು ಜಾರಿ ಬಿಳುವ ಸಂಭವ ಇರುತ್ತದೆ ಪ್ರವಾಸಿಗರು ಎಚ್ಚರದಿಂದ ದೂರದಿಂದ ವಿಕ್ಷಣೆ ಮಾಡಬೇಕು.   :- ಶಂಕರ ರಾಠೋಡ್ ತಾಪಂ.ಇಓ ಚಿಂಚೋಳಿ.

Leave a Reply

Your email address will not be published. Required fields are marked *

error: Content is protected !!