ಉದಯವಾಹಿನಿ , ಶ್ರಾವಣಿ ಸುಬ್ರಮಣ್ಯ ಹಿಟ್ ಕಾಂಬಿನೇಷನ್ ನಿರ್ದೇಶಕ ಮಂಜು ಸ್ವರಾಜ್ ಹಾಗೂ ಗೋಲ್ಡನ್ ಕ್ವೀನ್ ಅಮೂಲ್ಯ ಜೋಡಿಯಲ್ಲಿ ಸೆಟ್ಟೇರಿರೋ ಚಿತ್ರ ಪೀಕಬೂ ಅಮೂಲ್ಯ ಸುದೀರ್ಘ ಗ್ಯಾಪ್ ನಂತರ ಮಾಡ್ತಿರೋ ಸಿನಿಮಾ. ವಿಭಿನ್ನ ಟೀಸರ್ ಮೂಲಕ ಸಿನಿಮಾ ಸೆಟ್ಟೇರಿಸಿ ಸುದ್ದಿಯಾಗಿದ್ದ ಚಿತ್ರತಂಡ, ಇದೀಗ ಈ ಚಿತ್ರದ ನಾಯಕನ ಪರಿಚಯಿಸ್ತಿದೆ.
ನಾಯಕನ ಪರಿಚಯಕ್ಕೆ ವಿಶೇಷ ಟೀಸರ್ ಮಾಡಿರೋ ಪೀಕಬೂ ನಿರ್ದೇಶಕ ಸಂಕ್ರಾಂತಿ ವಿಶೇಷ ಸುಗ್ಗಿ ಸಂಭ್ರಮದಲ್ಲಿ ಬಿಡುಗಡೆ ಮಾಡಿದ್ದಾರೆ. ನಾಯಕ ಶ್ರೀರಾಮ್ ಅಮೂಲ್ಯಗೆ ಈ ಚಿತ್ರದಲ್ಲಿ ಹೀರೋ ಅನ್ನೋದನ್ನ, ಅಮೂಲ್ಯ ಆ್ಯಂಗಲ್ ನಲ್ಲಿ ವಿಭಿನ್ನವಾಗಿ ತೋರಿಸಿದ್ದಾರೆ.

ಅಂದ್ಹಾಗೆ, ಶ್ರೀರಾಮ್ ಹೊಸಬರಲ್ಲ. ಇರುವುದೆಲ್ಲವ ಬಿಟ್ಟು, ಗಜಾನನ ಅಂಡ್ ಗ್ಯಾಂಗ್, ಹೊಂದಿಸಿ ಬರೆಯಿರಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕನಾಗಿ ಕಾಣಿಸಿಕೊಂಡ ಶ್ರೀಮಾದೇವ್, ಪೀಕಬೂ ಮೂಲಕ ಶ್ರೀರಾಮ್ ಅಂತ ಹೆಸರು ಬದಲಿಸಿಕೊಂಡಿದ್ದಾರೆ.
ಶ್ರೀ ಕೆಂಚಾಂಬ ಸಿನಿಮಾ ಬ್ಯಾನರ್ ನಡಿಯಲ್ಲಿ, ಗಣೇಶ್ ಕೆಂಚಾಂಬ ನಿರ್ಮಾಣದಲ್ಲಿ ಪೀಕಬೂ ನಿರ್ಮಾಣವಾಗ್ತಿದೆ. ಮಂಜು ಸ್ವರಾಜ್ ನಿರ್ದೇಶನದ ಪೀಕಬೂಗೆ ಸುರೇಶ್ ಬಾಬು ಛಾಯಾಗ್ರಹಣ, ವೀರ್ ಸಮರ್ಥ್ ಶ್ರೀಧರ್ ಕಶ್ಯಪ್ ಸಂಗೀತ , ಎನ್.ಎಂ ವಿಶ್ವ ಸಂಕಲನ ಈ ಚಿತ್ರಕ್ಕಿದೆ. ಪೀಕಬೂ ಚಿತ್ರೀಕರಣ ಈಗಾಗ್ಲೇ ಶೇಕಡ 60% ಮುಗಿದಿದೆ. ಚಿತ್ರೀಕರಣ ಜೊತೆ ಜೊತೆಗೆ ಪ್ರಚಾರವನ್ನ ಮುಂದುವರೆಸಿಕೊಂಡು ಬರ್ತಿರೋ ಚಿತ್ರತಂಡ ಇದೀಗ ನಾಯಕನನ್ನ ಪರಿಚಯಿಸಿದೆ.

Leave a Reply

Your email address will not be published. Required fields are marked *

error: Content is protected !!