ಉದಯವಾಹಿನಿ , ಬೆಂಗಳೂರು: ಜಿಬಿಎ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಾವು ಮುಕ್ತವಾಗಿದ್ದೇವೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಇಲ್ಲ ಎಂಬ ದೇವೇಗೌಡರ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ ಅವರು, ಜಿಬಿಎ-ಸ್ಥಳೀಯ ಸಂಸ್ಥೆಗಳಲ್ಲಿ ಮೈತ್ರಿ ವಿಷಯದಲ್ಲಿ ನಾವು ಮುಕ್ತವಾಗಿದ್ದೇವೆ. ನಮ್ಮಿಂದ ಮೈತ್ರಿ ಗೊಂದಲಕ್ಕೆ ಎಡೆ ಮಾಡಿಕೊಡಬಾರದು ಎಂಬುದು ನಮ್ಮ ಅಭಿಪ್ರಾಯ. ಮುಂದಿನ ದಿನಗಳಲ್ಲಿ ಯಾವ ರೀತಿ ರಾಜಕೀಯ ಬೆಳವಣಿಗೆ, ಸ್ಥಳೀಯವಾಗಿ ಬಿಜೆಪಿ ನಾಯಕರ ತೀರ್ಮಾನ ಏನಿದೆ? ಇದೆಲ್ಲವನ್ನು ನೋಡಿಕೊಂಡು ತೀರ್ಮಾನ ಮಾಡ್ತೀವಿ ಎಂದಿದ್ದಾರೆ.

ನಮ್ಮ ಉದ್ದೇಶ, ನಮ್ಮ ಪಕ್ಷದ ಉದ್ದೇಶ ಕಾಂಗ್ರೆಸ್‌ನ ದುರಾಡಳಿತ ರಾಜ್ಯದಿಂದ ಹೋಗಬೇಕು. ಅದಕ್ಕೆ ನಾವು ತಯಾರಿದ್ದೇವೆ. ಮೈತ್ರಿ ವಿಷಯದಲ್ಲಿ ಮುಕ್ತವಾದ ಅವಕಾಶ ಇಟ್ಟುಕೊಂಡಿದ್ದೇವೆ. ಆ ಸಮಯಕ್ಕೆ ಏನಾಗಬೇಕು. ರಾಜ್ಯಕ್ಕೆ ಉತ್ತಮ ಆಡಳಿತ ಕೊಡಲು, ಬೆಂಗಳೂರಿನಲ್ಲಿ ಅನೇಕ ವರ್ಷಗಳಿಂದ ಅಭಿವೃದ್ಧಿ ಸ್ಥಗಿತವಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಬರೀ ಲೂಟಿ ಆಗ್ತಿದೆ. ಕಸ ವಿಲೇವಾರಿ, ಗುಂಡು ಮುಚ್ಚುವುದು, ಯಾವ ಯಾವ ರೀತಿ ಪಕ್ಷಗಳ ನಡವಳಿಕೆ, ಪಕ್ಷದ ಕೊಡುಗೆ ಏನು ಅಂತ ಇಟ್ಟುಕೊಂಡು ಜನರ ಬಳಿ ಹೋಗಬೇಕು. ಮುಂದೆ ಏನ್ ಡೆವಲಪ್ಮೆಂಟ್ ಆಗುತ್ತೋಮುಂಬೈ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮೈತ್ರಿ ಕೂಟ ಗೆಲುವು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಿನ್ನೆಯೇ ಎಕ್ಸಿಟ್ ಪೋಲ್‌ನಲ್ಲಿ ಮುಂಬೈನಲ್ಲಿ ಓಆಂ ಬರುತ್ತೆ ಅಂತ ಮಾಧ್ಯಮಗಳೇ ಹೇಳಿದ್ರಿ. ಅದರಂತೆ ಮುಂಬೈನಲ್ಲಿ ಬಿಜೆಪಿ ಮತ್ತು ಮೈತ್ರಿ ಪಕ್ಷಗಳು ಪ್ರಥಮವಾಗಿ ಅಧಿಕಾರಕ್ಕೆ ಬಂದಿದೆ.

Leave a Reply

Your email address will not be published. Required fields are marked *

error: Content is protected !!