ಉದಯವಾಹಿನಿ, ನವಿ ಮುಂಬೈ: ನ್ಯೂಜಿಲೆಂಡ್‌ನ ಅಮೇಲಿಯಾ ಕೆರ್ ಮಹಿಳಾ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಅವರು ಲೀಗ್‌ನಲ್ಲಿ 50 ವಿಕೆಟ್‌ಗಳನ್ನು ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಯುಪಿ ವಾರಿಯರ್ಸ್ ವಿರುದ್ಧ ಈ ಸಾಧನೆ ಮಾಡಿದ್ದಾರೆ. ಇಲ್ಲಿನ ನವಿ ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಮೈದಾನದಲ್ಲಿ ಅಮೇಲಿಯಾ ಕೆರ್‌, ದೀಪ್ತಿ ಶರ್ಮಾ ಅವರನ್ನು ಔಟ್‌ ಮಾಡುವ ಮೂಲಕ ತಮ್ಮ 50ನೇ ವಿಕೆಟ್ ಪೂರ್ಣಗೊಳಿಸಿದರು. ಮುಂಬೈ ಡಿಆರ್‌ಎಸ್ ಸಹಾಯದಿಂದ ಈ ಯಶಸ್ಸನ್ನು ಸಾಧಿಸಿತು ಮತ್ತು ಅಮೇಲಿಯಾ ಕೆರ್ 50 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಕೆರ್ ನಂತರ, ಮುಂಬೈ ಇಂಡಿಯನ್ಸ್‌ನ ಹೇಲಿ ಮ್ಯಾಥ್ಯೂಸ್ 43 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಇಲ್ಲಿಯವರೆಗೂ ಲೆಗ್-ಸ್ಪಿನ್ನರ್ ಅಮೇಲಿಯಾ ಕೆರ್ ಮಹಿಳಾ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ 34 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಬೌಲ್‌ ಮಾಡಿದ 113.4 ಓವರ್‌ಗಳಲ್ಲಿ 7.59ರ ಎಕಾನಮಿ ದರದಲ್ಲಿ 50 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ಅತ್ಯುತ್ತಮ ಪ್ರದರ್ಶನವೆಂದರೆ 38 ರನ್‌ಗಳಿಗೆ 5 ವಿಕೆಟ್‌ಗಳನ್ನು ಪಡದಿರುವುದಾಗಿದೆ. ಲೀಗ್‌ನ ಮೊದಲ ಸೀಸನ್‌ನಿಂದ ಅವರು ಮುಂಬೈ ಇಂಡಿಯನ್ಸ್ ಪರ ಆಡಿದ್ದಾರೆ. 2025ರ ಟೂರ್ನಿಯಲ್ಲಿ ಕೆರ್ ಅತಿ ಹೆಚ್ಚು ವಿಕೆಟ್ ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಅನ್ನು ಸಹ ಗೆದ್ದಿದ್ದರು.

ಅಮೇಲಿಯಾ ಕೆರ್ ಕೊನೆಯ ಓವರ್‌ನಲ್ಲಿ ಮೂರು ವಿಕೆಟ್‌: 2026ರ ಟೂರ್ನಿಯ 10 ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಯುಪಿ ವಾರಿಯರ್ಸ್ ನಡುವೆ ನಡೆಯಿತು. ಕೆರ್ ಪಂದ್ಯಕ್ಕೆ ಕಳಪೆ ಆರಂಭವನ್ನು ನೀಡಿದರು. ತಮ್ಮ ಮೊದಲ ಮೂರು ಓವರ್‌ಗಳಲ್ಲಿ ಅವರು 27 ರನ್‌ಗಳನ್ನು ಬಿಟ್ಟುಕೊಟ್ಟರು ಮತ್ತು ವಿಕೆಟ್ ಪಡೆಯಲಿಲ್ಲ. ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಅವರು ಕೇವಲ ಒಂದು ರನ್ ನೀಡಿ ಮೂರು ವಿಕೆಟ್‌ಗಳನ್ನು ಪಡೆದರು. ತಮ್ಮ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ ಅವರು 28 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಬಳಿಸಿದರು.

Leave a Reply

Your email address will not be published. Required fields are marked *

error: Content is protected !!