ಉದಯವಾಹಿನಿ, ಬೆಂಗಳೂರು: ನೂರಕ್ಕೆ ನೂರು ಸಿಎಂ ಸಿದ್ದರಾಮಯ್ಯ ಈ ಬಾರಿ ಬಜೆಟ್ ಮಂಡನೆ ಮಾಡ್ತಾರೆ. ನಾಯಕತ್ವ ಬದಲಾವಣೆಗೆ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಸಚಿವ ಬೋಸರಾಜು ತಿಳಿಸಿದ್ದಾರೆ.
ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಗೊಂದಲ ವಿಚಾರಕ್ಕೆ ವಿಕಾಸಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾಯಕತ್ವ ಬದಲಾವಣೆ ಅನ್ನೋದು ಮುಗಿದ ಅಧ್ಯಾಯ ಅಂತಲ್ಲ. ಸಿಎಂ, ಡಿಸಿಎಂ ಕೂಡ ಕ್ಲಿಯರ್ ಹೇಳಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಅಂದಿದ್ದಾರೆ. ಈಗ ಬದಲಾವಣೆ ಪರಿಸ್ಥಿತಿ ಇಲ್ಲ, ಅಂತಹ ಪರಿಸ್ಥಿತಿ ಬಂದರೆ ಹೈಕಮಾಂಡ್ ತೀರ್ಮಾನ ಮಾಡಲಿದೆ. ಬೆಳಿಗ್ಗೆಯಿಂದ ಸಂಜೆ ತನಕ ಬಿಜೆಪಿಯವ್ರು ಬೊಗಳುತ್ತಿರುತ್ತಾರೆ. ಲೋಪದೋಷಗಳಿದ್ರೆ ಹೇಳಲಿ, ಸುಮ್ಮನೆ ಸುಳ್ಳು ಹೇಳುವುದಲ್ಲ. ಹೊಸದಾಗಿ ಬಂದಿರುವ ಶಾಸಕರು ಉತ್ಸಾಹದಲ್ಲಿ ಹೇಳ್ತಾರೆ. ನೂರಕ್ಕೆ ನೂರು ಪರ್ಸೆಂಟ್ ಸಿಎಂ ಬಜೆಟ್ ಮಂಡಿಸುತ್ತಾರೆ ಎಂದು ಹೇಳಿದ್ದಾರೆ.
ಬಿಜೆಪಿಯವರು ಪಾದಯಾತ್ರೆ ಮಾಡೋಕೆ ಹೈಕಮಾಂಡ್ ಬಳಿ ಕೇಳಬೇಕು. ಪಾದಯಾತ್ರೆಗೆ ಮ್ಯಾಪ್ ರೆಡಿ ಮಾಡ್ಕೊಂಡಿದ್ರು ಆದ್ರೂ ಆಗಲಿಲ್ಲ. ನಮ್ಮ ಹೈಕಮಾಂಡ್ ಸರಿಯಾದ ಸಂದರ್ಭದಲ್ಲಿ ತೀರ್ಮಾನ ಮಾಡುತ್ತೆ. ಸಿಎಂ ಬದಲಾಗ್ತಾರೆ ಅಂತಾ ವಿಜಯೇಂದ್ರ ನೂರಾರು ಸಲ ಹೇಳಿದ್ರು. ಏನಾದ್ರೂ ಆಯ್ತಾ? ವಿಜಯೇಂದ್ರ ಬರಿ ಬಂಡಲ್ ಹೊಡೀತಾರೆ. ಅದಕ್ಕೆ ವಿಜಯೇಂದ್ರ ಅವರನ್ನು ಅಧ್ಯಕ್ಷ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
