ಉದಯವಾಹಿನಿ ಜೇವರ್ಗಿ:ಸರಕಾರಿ ನೌಕರರ ಸಂಘ ತಾಲೂಕು ಶಾಖೆ ಜೇವರ್ಗಿ ವತಿಯಿಂದ ಮಾನ್ಯ ರಾಜಾಧ್ಯಕ್ಷರಾದ ಶ್ರೀ ಸಿ.ಎಸ್ ಷಡಕ್ಷರಿ ರವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಸರಕಾರ ಮಟ್ಟದಲ್ಲಿ ಸುಳ್ಳು ಮನವಿ ಸಲ್ಲಿಸಿದ ಶ್ರೀ ಶಾಂತಾರಾಮ ಹಾಗೂ ಸಂಗಡಿಗರು ಇವರ ಮೇಲೆ ಕಾನೂನು ಕ್ರಮ ಜರುಗಿಸಲು ಮಾನ್ಯ  ತಾಲೂಕ ತಹಸೀಲ್ದಾರ ರವರಾದ ಶ್ರೀಮತಿ ರಾಜೇಶ್ವರಿ ಮೇಡಂ ರವರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಗುಡುಲಾಲ ಶೇಖ, ಕಾರ್ಯದರ್ಶಿಯಾದ ಶ್ರೀ ಬಸವರಾಜ ತೆಲ್ಕರ, ಖಜಾಂಚಿಯಾದ ಶ್ರೀ ಈರಣ್ಣ ಹಾಲಶೆಟ್ಟಿ ರಾಜ್ಯ ಪರಿಪರಿಷತ್ ಸದಸ್ಯರಾದ ಶ್ರೀ ರುದ್ರಪ್ಪ ಚಟ್ನಳ್ಳಿ, ಗೌರವ ಅಧ್ಯಕ್ಷರಾದ ಶ್ರೀ ಪೀರಪ್ಪ ಜಮಾದಾರ, ಪ್ರೌಢ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಸಂಘದ ಖಜಾಂಚಿಯಾದ ಶ್ರೀ ಧನಸಿಂಗ ರಾಠೋಡ ಮತ್ತು ಸಂಘದ ಹಿರಿಯ ಉಪಾಧ್ಯಕ್ಷರಾದ ಶ್ರೀ ಭಾಗಣ್ಣ ಕನ್ನೋಳ್ಳಿ, ಶ್ರೀ ಶರಣಪ್ಪ ನಾಟಿಕಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಕಲಬುರಗಿ ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಗೊಲ್ಲಾಳಪ್ಪ ಯಾತನೂರ, ಶ್ರೀ ಶಿವಾನಂದ ದಾನಮಗುಡಿ, ಶ್ರೀ ಬಾಬು ನಾಯಕ, ಶ್ರೀ ಸಂಗಪ್ಪ ಆಲೂರ, ಶ್ರೀ ಧರ್ಮರಾಜ, ಶ್ರೀಮತಿ ಸುರೇಖಾ ನಡುಮನಿ, ಶ್ರೀಮತಿ ವಿಶಾಲಾ ಕಾಂಬಳೆ ಇತರರು ಕೂಡಿಕೊಂಡು ಮಾನ್ಯ ತಹಸೀಲ್ದಾರ ರವರಿಗೆ ಮಿನಿ ವಿಧಾನ ಸೌಧ ಜೇವರ್ಗಿಯಲ್ಲಿ  ದಿನಾಂಕ: 24.07.2023 ರಂದು ಮಧ್ಯಾಹ್ನ 1.30 ಗಂಟೆಗೆ  ಮನವಿ ಸಲ್ಲಿಸಯಲಾಯಿತು.

Leave a Reply

Your email address will not be published. Required fields are marked *

error: Content is protected !!