ಉದಯವಾಹಿನಿ, ಸಾಮಾನ್ಯವಾಗಿ ಭೂಮಿ ಮೇಲಿರುವ ಪ್ರತಿಯೊಂದು ಅಂಶವು ತನ್ನದೇ ಆದ ವಿಭಿನ್ನ ಬಣ್ಣ ಹಾಗೂ ಗುಣವನ್ನು ಹೊಂದಿದೆ. ಆ ಬಣ್ಣಕ್ಕೆ ತಕ್ಕಂತೆ ಅದು ವಿಭಿನ್ನವಾಗಿ ವರ್ತಿಸುತ್ತದೆ. ಉದಾಹರಣೆಗೆ ಸಾಮಾನ್ಯವಾಗಿ ನಾವು ನೀರನ್ನ ಹೆಚ್ಚಾಗಿ ನೀಲಿ ಬಣ್ಣದಿಂದ ಗುರುತಿಸುತ್ತೇವೆ. ಆದರೆ ಅದಕ್ಕೆ ಬಣ್ಣವೇ ಇಲ್ಲ. ಬದಲಾಯಿಸಿದಂತಹ ಬಣ್ಣಕ್ಕೆ ಅದು ತಿರುಗುತ್ತದೆ. ಅದರಂತೆ ಒಂದು ಅಚ್ಚರಿಯೊಂದು ಆಗಸದಲ್ಲಿ ಕಂಡುಬಂದಿದೆ. ಏನಿದು? ಇದರ ಹಿಂದಿನ ಕಾರಣವೇನು? ಸಂಪೂರ್ಣ ಮಾಹಿತಿ ಇಲ್ಲಿದೆ. ಇಂಗ್ಲೆಂಡ್ ನ ಪಶ್ಚಿಮ ಮಿಡ್ ಲ್ಯಾಂಡ್ ಪ್ರದೇಶದಲ್ಲಿ ಬರ್ಮಿಂಗ್ ಹ್ಯಾಮ್ ಎಂಬ ನಗರವಿದೆ. ಇಂಗ್ಲೆಂಡ್ ನ ಎರಡನೆ ಅತಿ ದೊಡ್ಡ ನಗರವಾಗಿರುವ ಇದು ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಮತ್ತು ವಾಣಿಜ್ಯ ಕೇಂದ್ರವಾಗಿ ಹೆಸರು ಪಡೆದಿದೆ.
ಇತ್ತೀಚಿಗಷ್ಟೇ ಈ ಬರ್ಮಿಂಗ್ ಹ್ಯಾಮ್ ನಗರದಲ್ಲಿ ಅಚ್ಚರಿಯೊಂದು ಕಂಡುಬಂದಿದೆ. ಪಶ್ಚಿಮ ಮಿಡ್ ಲ್ಯಾಂಡ್ ನ ಜನರು ಆಕಾಶದಲ್ಲಿ ಅಚ್ಚರಿಯೊಂದನ್ನು ಗಮನಿಸಿದರು. ಸಾಮಾನ್ಯವಾಗಿ ನೀಲಿ ಬಣ್ಣದಲ್ಲಿರುವ ಆಕಾಶವು ವಿಭಿನ್ನವಾಗಿ ಗುಲಾಬಿ ಬಣ್ಣಕ್ಕೆ ತಿರುಗಿತ್ತು. ಇದನ್ನು ಕಂಡು ಅಚ್ಚರಿಗೊಂಡ ಜನರು ಒಂದೆಡೆ ಆಶ್ಚರ್ಯ ಪಟ್ಟರೆ, ಇನ್ನೊಂದೆಡೆ ಇದು ವಿಭಿನ್ನವಾದ ಸೂರ್ಯಾಸ್ತವಾಗಿರಬಹುದು ಎಂದು ಭಾವಿಸಿದರು. ಗುಲಾಬಿ ಆಕಾಶದ ಪರಿಣಾಮ ಬರ್ಮಿಂಗ್ ಹ್ಯಾಮ್ ಸೇರಿದಂತೆ ಸ್ಟಾಫರ್ಡ್ ಶೈರ್ ನ ಸುತ್ತಮುತ್ತಲಿನ ಪಟ್ಟಣಗಳ ಮೇಲೆ ಗುಲಾಬಿ ಛಾಯೆ ಆವರಿಸಿತ್ತು. ಆಕಾಶದಲ್ಲಿನ ಮೋಡಗಳು ಹಾಗೂ ಹಿಮವು ಕೂಡ ಗುಲಾಬಿ ಬಣ್ಣಕ್ಕೆ ತಿರುಗಿತ್ತು.
