ಉದಯವಾಹಿನಿ, ಬೆಂಗಳೂರು: ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಪ್ರಕರಣದದಲ್ಲಿ ಸರ್ಕಾರ ಕ್ರಮ ತೆಗೆದುಕೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ರಾಮಚಂದ್ರರಾವ್‌ರನ್ನ ಅಮಾನತು ಮಾಡಿದ್ದೇವೆ. ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಎಲ್ಲಾ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಸಚಿವ ತಿಮ್ಮಾಪುರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಹೇಳಿರೋ ಬಗ್ಗೆ ಗೊತ್ತಿಲ್ಲ. ಅವರನ್ನ ಕರೆದು ಮಾತಾಡ್ತೀನಿ. ಅವರು ಹೇಳಿಲ್ಲ ನೀವೆ ಹಾಗೆ ಕೇಳ್ತಾ ಇದ್ದೀರಿ ಎಂದರು.
ಇನ್ನೂ, ನಾಯಕತ್ವ ಬದಲಾವಣೆ ವಿಚಾರವಾಗಿ ದೆಹಲಿಗೆ ಹೋಗ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಹೈಕಮಾಂಡ್ ಕರೆದರೆ ದೆಹಲಿಗೆ ಹೊಗುವುದಾಗಿ ಹೇಳಿದ್ದಾರೆ. ಕರ್ತವ್ಯದಲ್ಲಿದ್ದಾಗ ಕಚೇರಿಯಲ್ಲೆ ಮಹಿಳೆಯೊಂದಿಗೆ ರಾಸಲೀಲೆ ವೀಡಿಯೋ ವೈರಲ್ ಬೆನ್ನಲ್ಲೇ ಡಿಜಿಪಿ ಕೆ.ರಾಮಚಂದ್ರರಾವ್ ತಲೆದಂಡವಾಗಿದೆ. ಸರ್ಕಾರಕ್ಕೆ ಮುಜುಗರ ತಂದು ಇಲಾಖೆಯ ಶಿಸ್ತು ನಿಯಮಗಳನ್ನ ಉಲ್ಲಂಘನೆ ಸಂಬಂಧ ಇಲಾಖಾ ತನಿಖೆ ಶುರುವಾಗಿದೆ. ಅಲ್ಲದೇ ಡಿಜಿಪಿ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯ ಹೆಚ್ಚಾಗಿದೆ. ವೀಡಿಯೋ ವೈರಲ್ ಆಗ್ತಿದ್ದಂತೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದ ಸಿಎಂ ಸಿದ್ದರಾಮಯ್ಯ, ಮುಜುಗರದಿಂದ ಪಾರಾಗಲು ರಾತ್ರೋರಾತ್ರಿ ಅಮಾನತು ಆದೇಶ ಹೊರಡಿಸಿದ್ದರು. ರಾಮಚಂದ್ರರಾವ್ ವೀಡಿಯೋಗಳು ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರ್ಕಾರಕ್ಕೆ ಭಾರಿ ಮುಜುಗರವನ್ನ ಉಂಟು ಮಾಡಿದೆ.
