ಉದಯವಾಹಿನಿ,ಮಧ್ಯ ಪ್ರದೇಶ: ಗುರಿಯ ಬೆನ್ನಟ್ಟಿದವರಿಗೆ ಯಾವುದೇ ಅಡೆತಡೆಯೂ ಕಷ್ಟವಾಗುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಈ ಸಹೋದರಿಯರು. ಸಲೋನಿ ಶರ್ಮಾ ಮತ್ತು ಪ್ರಗತಿ ಶರ್ಮಾ ಎಂಬ ಈ ಸಹೋದರಿಯರು ಜಲಕ್ರೀಡೆಯಲ್ಲಿ ಸಾಗರ್ ಜಿಲ್ಲೆಗೆ ಮಾತ್ರವಲ್ಲ, ಮಧ್ಯಪ್ರದೇಶಕ್ಕೆ ಕೀರ್ತಿಯನ್ನು ತಂದಿದ್ದಾರೆ.
ಪೈಂಟಿಂಗ್ ಕೆಲಸ ಮಾಡುವ ತಂದೆ ಮತ್ತು ಹೊಲಿಗೆ ಕೆಲಸ ಮಾಡುವ ತಾಯಿ ಯಾವುದೇ ಕಷ್ಟದ ಅರಿವು ಮಕ್ಕಳಿಗೆ ಆಗದಂತೆ ಬೆಳೆಸಿದ್ದಾರೆ. ಅಲ್ಲದೆ, ಅವರಿಗೆ ಎಲ್ಲ ರೀತಿಯ ಬೆಂಬಲವನ್ನು ನೀಡಿದ್ದು, ಪೋಷಕರ ಶ್ರಮ ಮಕ್ಕಳ ಕಠಿಣ ಪರಿಶ್ರಮ ಇದೀಗ ಯಶಸ್ಸು ನೀಡಿದೆ. ಪ್ರಸ್ತುತ ಈ ಸಹೋದರಿಯರು ರಾಜ್ಯದ ಜಲ ಕ್ರೀಡಾ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಪದಕ: ಮಹೇಶ್ವರ್ನಲ್ಲಿನ ಸಶಸ್ತ್ರಧಾರಾ ಘಾಟ್ನಲ್ಲಿ ನಡೆದ ಸ್ಲಾಲೋಮ್ ಜೂನಿಯರ್ ರಾಷ್ಟ್ರೀಯ ಚಾಂಪಿಯನ್ ಶಿಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಕೆನೊಯಿ ಕಾಯಕಿಂಗ್ನಲ್ಲಿ ಪ್ರಗತಿ ಶರ್ಮಾ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಮತ್ತೊಂದು ಅಂಶ ಎಂದರೆ ಈ ಇಬ್ಬರು ಸಹೋದರಿಯರು ಸಾಗರ್ ವಲಯ ಕ್ರೀಡಾ ಕಾಂಪ್ಲೆಕ್ಸ್ನಲ್ಲಿ ವಾಲಿಬಾಲ್ ಅನ್ನು ಕಲಿಯುತ್ತಿದ್ದು, ಪ್ರತಿಭಾ ಪರಿಶೀಲನೆ ವೇಳೆ ಜಲ ಕ್ರೀಡೆಗೆ ಆಯ್ಕೆಯಾಗಿದ್ದಾರೆ.
ತಮ್ಮ ಈ ಸಾಧನೆ ಕುರಿತು ಈಟಿವಿ ಭಾರತ್ ಜೊತೆಗೆ ಮಾತನಾಡಿರುವ ಸಲೋನಿ ಶರ್ಮಾ, ಸಾಗರ್ ಕೋಟ್ ಸೀಮಾ ಚಕ್ರವರ್ತಿಯ ಪ್ರೋತ್ಸಾಹ, ಪೋಷಕರ ಬೆಂಬಲದಿಂದಾಗಿ ತಾವು ಈ ಅಕಾಡೆಮಿ ಸೇರಿದ್ದು, ಇದೀಗ ಚಿನ್ನದ ಪದಕ ಗೆಲ್ಲುವಂತೆ ಆಗಿದೆ. ವಾಲಿಬಾಲ್ ಕಲಿಯುವ ಉದ್ದೇಶದಿಂದ ಸಾಗರ್ ವಲಯ ಕ್ರೀಡಾ ಕಾಂಪ್ಲೆಕ್ಸ್ ಅಲ್ಲಿ ದಾಖಲೆ ಮಾಡಿದೆ. ಆದರೆ, ಪ್ರತಿಭಾ ಗುರುತಿಸುವಿಕೆಯಲ್ಲಿ ನಾನು ಜಲಕ್ರೀಡೆಯಲ್ಲಿ ಅವಕಾಶವನ್ನು ಪಡೆದೆ. ಇದೀಗ ಈ ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲಬೇಕು ಎಂಬದು ನನ್ನ ಕನಸು ಎಂದಿದ್ದಾರೆ.
ಮೂರು ಪದಕ ಗೆದ್ದ ಪ್ರಗತಿ ಶರ್ಮಾ: ಸಲೋನಿ ಶರ್ಮಾ ಸಹೋದರಿ ಪ್ರಗತಿ ಶರ್ಮಾ ಕೂಡ ಕನೋಯಿ ಕಾಯಕಿಂಗ್ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಈ ಕುರಿತು ಮಾತನಾಡಿರುವ ಅವರ ಕೋಚ್ ಸೀಮಾ ಚಕ್ರವರ್ತಿ, ಪ್ರಗತಿ ಭೋಪಾಲ್ ಅಕಾಡೆಮಿಯಲ್ಲಿದ್ದು, ಒಂದೇ ವರ್ಷದಲ್ಲಿ 15 ಪದಕಗಳನ್ನು ಗೆದ್ದಿದ್ದು, ಅದರಲ್ಲಿ 3 ಚಿನ್ನದ ಪಕವಾಗಿವೆ. ವಾಲಿಬಾಲ್ ಕ್ರೀಡೆಯಿಂದಾಗಿ ಸಾಗರ್ ವಲಯ ಕ್ರೀಡಾ ಸಂಕೀರ್ಣಕ್ಕೆ ಆಗಮಿಸಿದ ಅವರು ಕ್ರೀಡಾ ಮತ್ತು ಯುವ ಕಲ್ಯಾಣ ಇಲಾಖೆಯ ಪ್ರತಿಭಾ ಶೋಧದಲ್ಲಿ ಜಲ ಕ್ರೀಡೆಗೆ ಆಯ್ಕೆಯಾದರು ಎಂದು ತಿಳಿಸಿದರು.
