ಉದಯವಾಹಿನಿ , : ಗಿಲ್ಲಿ ನಟ ಬಿಗ್‌ಬಾಸ್ ಗೆದ್ದಿದ್ದಕ್ಕೆ ಇಡೀ ಊರಿಗೆ ಊರೇ ಸಂಬ್ರಮಿಸುತ್ತಿದೆ. ಆದ್ರೆ ರಾಜಮಾತೆ ಅಶ್ವಿನಿ ಗೌಡ ಮಾತ್ರ ಬೇಸರ ಪಟ್ಟಿದ್ದಾರೆ. ರಾಜಮಾತೆ ಅಶ್ವಿನಿ ಗೌಡ ಮೂರನೇ ಸ್ಥಾನಕ್ಕೆ ಬಂದು ನಿಂತಿದ್ದಾರೆ.
ಗಿಲ್ಲಿ ನಟ ಬಡವನೋ ಶ್ರೀಮಂತನೋ ಎಂಬ ಚರ್ಚೆ ಮೊದಲಿನಿಂದಲೂ ನಡೆಯುತ್ತಿತ್ತು. ಆದ್ರೆ ಗಿಲ್ಲಿ ಗೆಲುವನ್ನ ರಾಜಮಾತೆ ಅಶ್ವಿನಿ ಗೌಡ ಒಪ್ಪಿಲ್ಲ. ಗಿಲ್ಲಿ ಬಡವ ಅಂತ ಬೋರ್ಡ್ ಹಾಕಿಕೊಂಡು ಗೆದ್ದಿದ್ದಾನೆ. ಅದು ನನಗೆ ಇಷ್ಟ ಆಗಿಲ್ಲ ಅಂತ ಅಶ್ವಿನಿ ಹೇಳಿದ್ದಾರೆ.
ಜೊತೆಗೆ BBK 12ರ ಒಟ್ಟಾರೆ ವೋಟ್ ನಂಬರ್ ಆಚೆ ಬಂದರೆ ನಾನೇ ವಿನ್ನರ್ ಎಂದು ಅಶ್ವಿನಿ ಗೌಡ ಸವಾಲು ಹಾಕಿದ್ದಾರೆ.
ಗಿಲ್ಲಿಯನ್ನು ವಿನ್ನರ್ ಎಂದು ಒಪ್ಪಿಕೊಳ್ಳಲು ಅಶ್ವಿನಿ ಸಿದ್ಧವಾಗಿಲ್ಲ. ನನಗೂ, ಗಿಲ್ಲಿಗೂ ಬಂದ ಮತಗಳ ಮಧ್ಯೆ ಅಜಗಜಾಂತರ ವ್ಯತ್ಯಾಸ ಇದೆ ಎಂಬುದು ನನಗೆ ಬಂದ ಮಾಹಿತಿ. ಆ ಸಂಖ್ಯೆ ಹೊರ ಬಂದರೆ ನಾನೇ ವಿನ್ನರ್ ಎಂದು ಅಶ್ವಿನಿ ಹೇಳಿದ್ದಾರೆ.
ಬಿಗ್ ಬಾಸ್’ ಕಾಮಿಡಿ ಶೋ ಅಲ್ಲ ಎಂಬುದು ಅಶ್ವಿನಿ ಅಭಿಪ್ರಾಯ. ‘ಸುದೀಪ್ ಅವರು ಈ ಬಾರಿಯಾದರೂ ಮಹಿಳೆಯರ ಕೈ ಎತ್ತುತ್ತಾರೆ ಎಂದುಕೊಂಡಿದ್ದೆ. ಆದರೆ, ನನ್ನ ಕೈ ಬಿಡ್ತಾರೆ ಅಂತ ಅಂದುಕೊಂಡಿ ರಿಲ್ಲ’ ಎಂದು ಅಶ್ವಿನಿ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!