ಉದಯವಾಹಿನಿ, ಬೌದ್ಧ ಧರ್ಮದ ತವರಾದ ಭಾರತದ ಹಲವೆಡೆ ಸ್ತೂಪಗಳು, ಬೌದ್ಧ ಬಿಕ್ಕುಗಳು ವಾಸವಾಗಿದ್ದ ನೆಲೆಗಳು ಮಣ್ಣಿನಲ್ಲಿ ಅಂತರ್ಗತವಾಗಿ ಹೋಗಿವೆ. ಅದರಲ್ಲಿ ಎಷ್ಟೋ ಅವಶೇಷಗಳು ಸಿಕ್ಕಿವೆ.. ಇನ್ನೂ ಕೆಲವು ಇಂದಿಗೂ ಸಿಗುತ್ತಲೇ ಇವೆ. ಅದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ಜೆಹಾನ್‌ಪೋರಾದಲ್ಲಿ ಪತ್ತೆಯಾದ ಸಾವಿರಾರು ವರ್ಷಗಳ ಹಿಂದಿನ ಮೂರು ಬೌದ್ದ ಸ್ತೂಪಗಳು. ಹೌದು ಸುಮಾರು 2000 ವರ್ಷಗಳ ಹಿಂದಿನ ಬೌದ್ಧ ಸ್ತೂಪಗಳು ಬಾರಾಮುಲ್ಲಾದಲ್ಲಿ ಪತ್ತೆಯಾಗಿವೆ. ಇದರ ಪತ್ತೆಗೆ ಕಾರಣವಾಗಿದ್ದು ಫ್ರಾನ್ಸ್‌ನಲ್ಲಿರೋ ಫೋಟೋ ಎಂಬುದು ಅಚ್ಚರಿಯ ವಿಚಾರವಾಗಿದೆ. ಈ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ. ಫ್ರಾನ್ಸ್‌ನಲ್ಲಿ ಪತ್ತೆಯಾದ ಫೋಟೋ
ಕಾಶ್ಮೀರದಿಂದ ಸಾವಿರಾರು ಮೈಲು ದೂರದಲ್ಲಿರುವ ಫ್ರಾನ್ಸ್‌ನ ವಸ್ತುಸಂಗ್ರಹಾಲಯದಲ್ಲಿ ಬಾರಾಮುಲ್ಲಾದಲ್ಲಿನ ಮೂರು ಬೌದ್ಧ ಸ್ತೂಪಗಳಿರುವ ಹಳೆಯ ಫೋಟೊ ಪತ್ತೆಯಾಗಿದೆ. ಇಷ್ಟು ದಿನಗಳ ಕಾಲ 10 ಎಕರೆಗಳಷ್ಟು ವಿಸ್ತಾರವಾಗಿ ಹರಡಿರುವ ಈ ದಿಬ್ಬಗಳನ್ನು ಸಾಮಾನ್ಯ ದಿಬ್ಬಗಳು ಎಂದು ಜನರು ಭಾವಿಸಿದ್ದರು. ಆದರೆ, ಪುರಾತತ್ವ ಶಾಸ್ತ್ರಜ್ಞರು ಆ ಸ್ಥಳವನ್ನು ಅಧ್ಯಯನ ಮಾಡಿದ ಬಳಿಕ ಅದು ಮಾನವ ನಿರ್ಮಿತ ರಚನೆಗಳು ಎಂದು ಗುರುತಿಸಿದ್ದಾರೆ. ಇದಕ್ಕಾಗಿ ಡ್ರೋನ್ ಮೂಲಕ ಚಿತ್ರಗಳನ್ನು ತೆಗೆಯಲಾಗಿತ್ತು.

2023 ರಲ್ಲಿ, ಫೆಲೋಶಿಪ್‌ನಲ್ಲಿ ಫ್ರಾನ್ಸ್‌ಗೆ ಭೇಟಿ ನೀಡಿದ್ದವರು ಅಲ್ಲಿನ ವಸ್ತುಸಂಗ್ರಹಾಲಯ ಒಂದಲ್ಲಿರುವ ಫೋಟೋದಲ್ಲಿ ಕಾಶ್ಮೀರದಲ್ಲಿರುವ ಈ ಸ್ಥಳವನ್ನು ಗುರುತಿಸಿದ್ದರು. ಬ್ರಿಟಿಷರು ಲಾಹೋರ್ ಮತ್ತು ಹಿಂದಿನ ತಕ್ಷಶಿಲಾ (ವಾಯುವ್ಯ ಪಾಕಿಸ್ತಾನ) ಮೂಲಕ ಕಾಶ್ಮೀರಕ್ಕೆ ಪ್ರಯಾಣಿಸುವಾಗ ಸೆರೆಹಿಡಿದ ಫೋಟೋ ಅದಾಗಿದೆ.

Leave a Reply

Your email address will not be published. Required fields are marked *

error: Content is protected !!