
ಉದಯವಾಹಿನಿ ಕುಶಾಲನಗರ: ವೃದ್ಧಾಶ್ರಮಗಳಲ್ಲಿರುವ ವೃದ್ಧರನ್ನು ಪೋಷಕರಂತೆ ನೆನೆದು ಅವರ ಪೋಷಣೆಯ ಜವಾಬ್ದಾರಿಯನ್ನು ನಾವು ಒತ್ತಿಕೊಳ್ಳಬೇಕು. ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಇಂದಿಲ್ಲಿ ಹೇಳಿದರು.ಕೊಡಗು ಜಿಲ್ಲೆಯ ಬುದ್ಧ ಪ್ರತಿಷ್ಠಾನ ಶಾಖೆಯ ವತಿಯಿಂದ ಗುರುಪೂರ್ಣಿಮಾ ಅಂಗವಾಗಿ ಕುಶಾಲನಗರದ ಸಮೀಪದ ಕೊಡಿಗೆಯ ವೃದ್ಧಾಶ್ರಮದಲ್ಲಿ ಮಾತೃ ಪಿತೃಗಳಿಗೆ ವಸ್ತ್ರ ವಿತರಣೆ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇತ್ತೀಚಿಗೆ ಮಕ್ಕಳಿಗೆ ಪೋಷಕರ ಮೇಲೆ ಪ್ರೀತಿ ಕಡಿಮೆ ಆಗಿದೆ ತಮಗೆ ಜನ್ಮ ನೀಡಿ ಸಾಕಿ ಸಲುವಿಗೆ ಮಕ್ಕಳು ವೃದ್ದಾಶ್ರಮಕ್ಕೆ ಪೋಷಕರನ್ನು ಕಳುಹಿಸುತ್ತಿರುವುದು ಬೇಸರದ ಸಂಗತಿ ಇದ್ದರು. ಇದೇ ಸಂದರ್ಭ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿಪಿ ಶಶಿಧರ್ ಮಾತನಾಡಿ ತಮ್ಮ ತಂದೆ ತಾಯಂದಿರನ್ನು ವೃದ್ಧಾಶ್ರಮಗಳಿಗೆ ಕಳಿಸುವ ಮಕ್ಕಳ ಮನಸ್ಸು ಪರಿವರ್ತನೆ ಆಗಬೇಕಿದೆ ಎಂದರು.
ಇದೇ ಸಂದರ್ಭ ವೃದ್ಧರಿಗೆ ಶಾಸಕರಾದ ಮಂತರ್ ಗೌಡ ವಸ್ತ್ರಗಳನ್ನು ವಿತರಿಸಿ ಸಮಸ್ಯೆಗಳನ್ನು ಆಲಿಸಿದರು ಬುದ್ಧ ಪ್ರತಿಷ್ಠಾನ ಜಿಲ್ಲಾ ಶಾಖೆಯ ದಮ್ಮಾಚಾರಿ ಶಿವಕುಮಾರ್ ಮಾತನಾಡಿದರು ಸಾಹಿತಿ ಭಾರದ್ವಾಜ್ ವಕೀಲರಾದ ಶಿವಕುಮಾರ್ ಪತ್ರಕರ್ತರಾದ ಚಂದ್ರಮೋಹನ್ ಟಿ ಆರ್ ಪ್ರಭುದೇವ್ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಕಾಂಗ್ರೆಸ್ ಮುಖಂಡರಾದ ಮಂಜುನಾಥ್ ಗುಂಡೂರಾವ್ ಪ್ರಮೋದ್ ಮುತ್ತಪ್ಪ ಕೆಕೆ ಮಂಜುನಾಥ್ ಅರುಣ್ ಇತರರು ಹಾಜರಿದ್ದರು.
3 Attachments • Scanned by Gmail
