ಉದಯವಾಹಿನಿ, ನವದೆಹಲಿ: ಗಣರಾಜ್ಯೋತ್ಸವಕ್ಕೆ ಇನ್ನು ಎರಡು ದಿನಗಳು ಬಾಕಿ ಉಳಿದಿರುವ ಹೊತ್ತಿನಲ್ಲಿ ದೇಶದ ಗಡಿಭಾಗಗಳಲ್ಲಿ ಹೊಸ ಭದ್ರತಾ ಎಚ್ಚರಿಕೆ ಹೊರಡಿಸಲಾಗಿದೆ. ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಹಾಗೂ ರಾಜಸ್ಥಾನ ಗಡಿಪ್ರದೇಶಗಳಲ್ಲಿ ಡ್ರೋನ್, ಪ್ಯಾರಾಗ್ಲೈಡರ್ ಮತ್ತು ಹ್ಯಾಂಗ್ ಗ್ಲೈಡರ್ ಮೂಲಕ ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.ಗುಪ್ತಚರ ಮಾಹಿತಿಯ ಪ್ರಕಾರ, ಭಯೋತ್ಪಾದಕರು ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಭಾರತಕ್ಕೆ ಅಕ್ರಮವಾಗಿ ತರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈ ಗಡಿಪ್ರದೇಶಗಳಲ್ಲಿ ಹಿಂದೆಯೂ ಸಂಶಯಾಸ್ಪದ ಏರ್ ಚಟುವಟಿಕೆಗಳು ದಾಖಲಾಗಿದ್ದು, ಈ ಹಿನ್ನಲೆ ಹೆಚ್ಚುವರಿ ನಿಗಾವಹಿಸಲು ಸಲಹೆ ನೀಡಿದೆ.

ಲಷ್ಕರ್-ಇ-ತೊಯ್ಬಾ ಮತ್ತು ಕೆಲವು ಸಿಖ್ ಉಗ್ರಗಾಮಿ ಸಂಘಟನೆಗಳು ಇತ್ತೀಚೆಗೆ ಪ್ಯಾರಾಗ್ಲೈಡಿಂಗ್ ಸಲಕರಣೆಗಳನ್ನು ಸಂಗ್ರಹಿಸಿಕೊಂಡಿವೆ ಎಂಬ ಮಾಹಿತಿ ಇದೆ. ಆದ್ದರಿಂದ ಈ ರೀತಿಯ ಏರ್ ರೂಟ್‌ಗಳ ಮೂಲಕ ಒಳನುಸುಕುವಿಕೆಯ ಪ್ರಯತ್ನಗಳು ನಡೆಯಬಹುದು ಎಂದು ಭದ್ರತಾ ಏಜೆನ್ಸಿಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳಿಗೆ ಗರಿಷ್ಠ ಎಚ್ಚರಿಕೆಯನ್ನು ಆದೇಶಿಸಲಾಗಿದೆ. ಏರಿಯಲ್ ಸರ್ವೇಲೆನ್ಸ್‌ ಅನ್ನು ತೀವ್ರಗೊಳಿಸಲಾಗಿದ್ದು, ಭೂಮಿ ಮಟ್ಟದ ಭದ್ರತಾ ವ್ಯವಸ್ಥೆಯನ್ನು ಹೆಚ್ಚು ಬಲಪಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!