
ಉದಯವಾಹಿನಿ ಯಾದಗಿರಿ : ಬಾಲಕಾರ್ಮಿಕ ಮಕ್ಕಳನ್ನು ರಕ್ಷಿಸಿ ಮುಖ್ಯವಾಹಿನಿಗೆ ತರಲು ಶ್ರಮಿಸಬೇಕು ಎಂದು ತಹಸೀಲ್ದಾರರು ಶ್ರೀ ಉಮಾಕಾಂತ ಹಳ್ಳಿ ಅವರು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಕಾರ್ಮಿಕ ಇಲಾಖೆಯವತಿಯಿಂದ ಬಾಲಕಾರ್ಮಿಕ ಯೋಜನಾ ಸೊಸೈಟಿಯ ವತಿಯಿಂದ ಶಹಾಪುರ ತಾಲ್ಲೂಕು ಮಟ್ಟದ ಟಾಸ್ಕ್ ಪೋರ್ಸ್ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಹುತೇಕ ಮಕ್ಕಳು ಶಾಲೆಬಿಟ್ಟು ಕೃಷಿ ಮತ್ತು ಇತರೆ ಕೆಲಸಕ್ಕಾಗಿ ಗೂಡ್ಸ್ ಮತ್ತು ಟಂಟಂಗಳಲ್ಲಿ ತೆರಳುತ್ತಿದ್ದಾರೆ. ಅಂತಹ ಮಕ್ಕಳಿಗೆ ಮತ್ತು ಪಾಲಕರಿಗೆ ಜಾಗೃತಿಯನ್ನು ಮೂಡಿಸಬೇಕು ಎಂದು ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರಿಗೆ ಸಲಹೆ ನೀಡಿದರು. ಸರಕಾರವು ಕಲಂ-17ರ ಅಡಿಯಲ್ಲಿ ಬರುವ 11 ಇಲಾಖೆಯ ಅಧಿಕಾರಿಗಳನ್ನು ನಿರೀಕ್ಷಕರನ್ನಾಗಿ ನೇಮಕ ಮಾಡಿದೆ. ಪ್ರತಿ ತಿಂಗಳು ಕನಿಷ್ಠ 1 ರೈಡ್‌ನ್ನಾದರು ಕೈಗೊಳ್ಳಬೇಕು. ಹಾಗೂ ರೈಡ್‌ನಲ್ಲಿ ಕಲಂ-17 ರಡಿಯಲ್ಲಿ ಬರುವ ನಿರೀಕ್ಷಕರು ಕಡ್ಡಾಯವಾಗಿ ಭಾಗವಹಿಸಿ, ನಗರಸಭೆ ವತಿಯಿಂದ ಪ್ರತಿನಿದಿ ಬೆಳಿಗ್ಗೆ ಬಾಲಕಾರ್ಮಿಕತೆಯ ಕುರಿತು ಪ್ರಚಾರ ಕೈಗೊಳ್ಳುವಂತೆ ತಿಳಿಸಿದರು.
ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ರಿಯಾಜ್ ಪಟೇಲ್ ವರ್ಕನಳ್ಳಿ ಅವರು ಮಾತನಾಡಿ ಈಗಾಗಲೇ ಕಾರ್ಮಿಕ ಇಲಾಖೆಯ ಮಕ್ಕಳನ್ನು ದುಡಿಸಿಕೊಳ್ಳುತ್ತಿರುವ ಹೋಟೆಲ್, ಗ್ಯಾರೇಜ್, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮೇಲೆ ನಿರಂತರವಾಗಿ ತಪಾಸಣೆ, ದಾಳಿ ನಡೆಸಿ ಮತ್ತು ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಇಲಾಖೆಯ ಜೊತೆಗೆ ಕಲಂ-17 ರಡಿ ಬರುವ 11 ಇಲಾಖೆಗಳ ನಿರೀಕ್ಷಕರ ಹಾಗೂ ಕಲಂ 16ರ ಅಡಿಯಲ್ಲಿ ಬರುವ ಪೊಲೀಸ್ ಇಲಾಖೆಯ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸೋಮಶೇಖರ್, ಕಾರ್ಮಿಕ ನಿರೀಕ್ಷಕರಾದ ಸಾಬೇರಾ ಬೇಗಂ, ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ.ರಮೇಶ ಗುತ್ತೆದಾರ, ಪೌರಾಯುಕ್ತರಾದ ರಮೇಶ ಬಡಿಗೇರ್, ಶಿಕ್ಷಣ ಇಲಾಖೆಯ ಇ.ಸಿ.ಓ ಇರಯ್ಯ ಹಿರೇಮಠ, ಕಾರ್ಮಿಕ ಇಲಾಖೆ ಏಥೇಶ್ಯಾಮ, ಜಾವೀದ್ ಸೇರಿದಂತೆ ಕಲಂ 17ರ ಅಡಿಯಲ್ಲಿ ಬರುವ ಎಲ್ಲಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
