ಉದಯವಾಹಿನಿ ಮುದಗಲ್ಲ : ಎಲ್ಲಿ ನೋಡಿದರೂ, ಎಲ್ಲೆಲ್ಲಿ ನೋಡಿದರೂ ಬೆಳಕಿನ ಚಿತ್ತಾರ ಕಂಬಗಳಲ್ಲಿ ಕತೆ ಹೇಳುವಂತಿರುವ ದೀಪಗಳ ಅಲಂಕಾರ..ಮುದಗಲ್ಲ ಪ್ರಮುಖ ರಸ್ತೆಯುದ್ದಕ್ಕೂ ಕಂಬಗಳಿಗೆ ಲೈಟಿಂಗ್ಸ್‌ ಸರ ವಿದ್ಯುತ್‌ ದೀಪಗಳ ಅಬ್ಬರ..ಹೌದು, ಈ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಬೇಕೆಂದರೆ ನೀವಿಗ ಐತಿಹಾಸಿಕ ಮುದಗಲ್ಲ ಮೊರಹಂ ನೋಡಲು ಬರಲೇಬೇಕು..ಹೌದು ಸ್ವರ್ಗವೇ ಧರೆಗಿಳಿದಿದೆ ಮುದಗಲ್ಲ ಪಟ್ಟಣದ ಮೊಹರಂ ಭಾವೈಕ್ಯದ ಪ್ರತೀಕವಾಗಿದೆ. ಜೊತೆಗೆ ಮೊರಹಂ ಆಚರಣೆಗೆ ಐತಿಹಾಸಿಕ ಹಿನ್ನೆಲೆ ಇದೆ. ಇಲ್ಲಿ ನಡೆಯುವ ಮೊಹರಂ ಆಚರಣೆ ವೀಕ್ಷಣೆಗೆ ರಾಜ್ಯ, ನೆರೆ ರಾಜ್ಯಗಳ ಸಹಸ್ರಾರು ಭಕ್ತರು ಸೇರುವುದು ವಿಶೇಷವಾಗಿದೆ ಐತಿಹಾಸಿಕ ಮೊಹರಂಗೆ ಹೆಚ್ಚಿನ ಕಳೆ ತರುವ ಉದ್ದೇಶದಿಂದ ಪುರಸಭೆಯ ನೂತನವಾಗಿ ಬಂದ ಮುಖ್ಯಾಧಿಕಾರಿ N A ನಬಿಸಾಬ ಕಂದಗಲ್ಲ ಹಾಗೂ ಪುರಸಭೆ ಸದಸ್ಯರು ಹೆಚ್ಚಿನ ಮುತುವರ್ಜಿ ವಹಿಸಿಐತಿಹಾಸಿಕ ಮುದಗಲ್ಲ ಮೊರಹಂ ಪ್ರಯುಕ್ತ ಮುದಗಲ್ಲ ಪ್ರಮುಖ ಮುಖ್ಯ ರಸ್ತೆ ಕಂಬಗಳಿಗೆ ಹಾಗೂ ಪುರಸಭೆ ಕಛೇರಿಗೆ ಮಾಡಿರೋ ದೀಪಾಲಂಕಾರ ಮನಸೂರೆಗೊಳ್ಳುತ್ತಿದೆ. ಬಣ್ಣಬಣ್ಣದ ದೀಪಾಲಂಕಾರ ಜನರನ್ನ ಆಕರ್ಷಣೆ ಮಾಡುತ್ತಿದ್ದು, ನೋಡೋಕೆ ಎರಡು ಕಣ್ಣು ಸಾಲದು ಎಂಬಂತೆ ಭಾಸವಾಗುತ್ತಿದೆ.ಬೆಳಕಿನ ಚಿತ್ತಾರ ಕಂಡು ಜನರು ಮೂಕವಿಸ್ಮಿತ ರಾಗಿದ್ದಾರೆ. ದೀಪಾಲಂಕಾರ ಕಂಗೊಳಿಸುತ್ತಿದೆ ಪುರಸಭೆ ನೂತನವಾಗಿ ಬಂದ ಮುಖ್ಯಾಧಿಕಾರಿ N A ನಬಿಸಾಬ ಕಂದಗಲ್ಲ ಹಾಗೂ ಪುರಸಭೆ ಸದಸ್ಯರು ಇ ಕೆಲಸಕ್ಕೆ ಮುದಗಲ್ಲ ಜನತೆಯ ಸಂತಸ ವ್ಯಕ್ತಪಡಿಸಿದ್ದಾರೆ..ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ N A
ನಭಿಸಾಬ ಕಂದಗಲ್ಲ ,ಪುರಸಭೆ ಸದಸ್ಯ ದುರಗಪ್ಪ ಕಟ್ಟಿಮನಿ,ಪುರಸಭೆ ಸಿಬ್ಬಂದಿ ಮಾಲಿಂಗರಾಯ್ಯ , ಹಾಗೂ ಕೃಷ್ಣ ಚಲುವಾದಿ ,ಅಮರೇಶ ಪೇಟರ್, ಸಂಪತ್ತು ಕುಮಾರ್ ,ಬಾಬು, ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!