ಉದಯವಾಹಿನಿ, : ಐಪಿಎಲ್‌ (IPL 2026) ಆರಂಭಕ್ಕೆ ದಿನಗಳ ಏಣಿಕೆ ಶುರುವಾಗಿದೆ.ಆದರೆ ಅದಕ್ಕೂ ಮೊದಲು ಹಾಲಿ ಚಾಂಪಿಯನ್ ಆರ್​ಸಿಬಿ (RCB) ತನ್ನ ತವರು ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಡುತ್ತದೆಯೇ? ಇಲ್ಲವೇ ಎಂಬ ಪ್ರಶ್ನೆ .
ಏಕೆಂದರೆ ಪಂದ್ಯಾವಳ ಸನಿಹವಾಗುತ್ತಾ ಬಂದರೂ ಆರ್​ಸಿಬಿ ಫ್ರಾಂಚೈಸಿ ಮಾತ್ರ ತನ್ನ ತವರು ನೆಲವನ್ನು ಇದುವರೆಗೂ ಖಚಿತಪಡಿಸಿರಲಿಲ್ಲ. ಆದರೀಗ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಸಿಕ್ಕಿದ್ದು, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತವರು ಪಂದ್ಯಗಳನ್ನು ಆಡಿಸಲು ಆರ್​ಸಿಬಿ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ.

ನಿನ್ನೆಯಷ್ಟೇ ಕೆಎಸ್​ಸಿಎ ಆಡಳಿತ ಮಂಡಳಿ ಪತ್ರಿಕಾಗೋಷ್ಠಿ ನಡೆಸಿ, ಚಿನ್ನಸ್ವಾಮಿ ಕ್ರೀಡಾಂಗಣದ ದುರಸ್ತಿ ಕಾರ್ಯ ಭಾಗಶಃ ಮುಗಿದಿದ್ದು, ಪಂದ್ಯಗಳ ಆತಿಥ್ಯಕ್ಕೆ ಸಜ್ಜಾಗುತ್ತಿದೆ . ಹೀಗಾಗಿ ನಾವು ಐಪಿಎಲ್ ಪಂದ್ಯಗಳನ್ನು ಬೆಂಗಳೂರಿನಲ್ಲೇ ಆಡಬೇಕೆಂದು ನಾವು ಆರ್​ಸಿಬಿ ಮ್ಯಾನೇಜ್​ಮೆಂಟ್​ಗೆ ಮನವಿ ಮಾಡಿದ್ದೇವೆ. ಆದರೆ ಇದುವರೆಗೂ ಫ್ರಾಂಚೈಸಿಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ ಎಂದಿತ್ತು.

ಇದೀಗ ಕೆಎಸ್​ಸಿಎಯ ಸುದ್ದಿಗೋಷ್ಠಿ ನಡೆದ ಒಂದು ದಿನದ ಬಳಿಕ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಆರ್​ಸಿಬಿ ಆಡಳಿತ ಮಂಡಳಿ, ‘ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯಗಳನ್ನು ನಡೆಸಲು ಅನುಮತಿ ನೀಡಿದ ಕರ್ನಾಟಕ ಸರ್ಕಾರದ ನಡೆಯನ್ನು ಸ್ವಾಗತಿಸುತ್ತೇವೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಮ್ಮ ಅಭಿಮಾನಿಗಳ ನಡುವೆ ಪಂದ್ಯ ನಡೆಸಲು ಉತ್ಸುಕರಾಗಿದ್ದೇವೆ. ಆದರೆ ಚಿನ್ನಸ್ವಾಮಿ ಮೈದಾನದಲ್ಲಿ ಮತ್ತಷ್ಟು ಸಮಸ್ಯೆಗಳನ್ನು ಸರಿಪಡಿಸಬೇಕಿದೆ. ಪ್ರೇಕ್ಷಕರ ಭದ್ರತಾ ದೃಷ್ಟಿಯಿಂದ ಕೆಲವನ್ನು ಸರಿಪಡಿಸಬೇಕಿದೆ. ಅಭಿಮಾನಿಗಳ ಸುರಕ್ಷತೆಗೆ ಸಾಧ್ಯವಿರುವ ಎಲ್ಲಾ ರೀತಿಯ ಭದ್ರತಾ ಕ್ರಮ ತೆಗೆದುಕೊಳ್ಳಬೇಕು. ಆರ್​ಸಿಬಿ ಪಾಲಿಗೆ ಅಭಿಮಾನಿಗಳೇ ಆತ್ಮ ಮತ್ತು ಹೃದಯ. ಚಿನ್ನಸ್ವಾಮಿಯಲ್ಲಿ ಪಂದ್ಯ ಆಯೋಜಿಸಲು KSCA ಯತ್ನ ಶ್ಲಾಘನೀಯ ಎಂದಿದೆ.

Leave a Reply

Your email address will not be published. Required fields are marked *

error: Content is protected !!