ಉದಯವಾಹಿನಿ, ಬೀಜಿಂಗ್ (ಚೀನಾ): ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಶಿಸ್ತು ಮತ್ತು ಕಾನೂನುಗಳ ಗಂಭೀರ ಉಲ್ಲಂಘನೆಗಾಗಿ ಪಿಎಲ್‌ಎಯ ಅತ್ಯುನ್ನತ ಅಧಿಕಾರಿ ಜನರಲ್ ಜಾಂಗ್ ಯೂಕ್ಸಿಯಾ ಸೇರಿದಂತೆ ಇಬ್ಬರು ಹಿರಿಯ ಚೀನಾದ ಮಿಲಿಟರಿ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ಇಲ್ಲಿನ ರಕ್ಷಣಾ ಸಚಿವಾಲಯ ತಿಳಿಸಿದೆ.ಜನರಲ್ ಜಾಂಗ್ ಯೂಕ್ಸಿಯಾ, ಕ್ಸಿ ಜಿನ್‌ಪಿಂಗ್ ನೇತೃತ್ವದ ಚೀನಾದ ಮಿಲಿಟರಿಯ ಒಟ್ಟಾರೆ ಹೈಕಮಾಂಡ್ ಆಗಿದ್ದು, ಕೇಂದ್ರ ಮಿಲಿಟರಿ ಆಯೋಗದ (ಸಿಎಂಸಿ) ಮೊದಲ ಶ್ರೇಯಾಂಕದ ಉಪಾಧ್ಯಕ್ಷರಾಗಿದ್ದಾರೆ. ಸಿಎಂಸಿಯಲ್ಲಿ ಜಾಂಗ್ ಅವರ ಸ್ಥಾನವು ಅವರನ್ನು ಚೀನಾದ ಮಿಲಿಟರಿಯಲ್ಲಿ ಅತ್ಯುನ್ನತ ಶ್ರೇಣಿಯ ಸಮವಸ್ತ್ರಧಾರಿ ಅಧಿಕಾರಿಯನ್ನಾಗಿ ಮಾಡುತ್ತದೆ.
ಇತರ ಅಧಿಕಾರಿಗಳಾದ ಜಂಟಿ ಸಿಬ್ಬಂದಿ ಇಲಾಖೆಯ ಮುಖ್ಯ ಸಿಬ್ಬಂದಿಯಾಗಿರುವ ಲಿಯು ಝೆನ್ಲಿ ತನಿಖೆಗೆ ಒಳಪಟಿದ್ದಾರೆ. ಸಿಪಿಸಿ ಕೇಂದ್ರ ಸಮಿತಿಯ ಚರ್ಚೆಯ ನಂತರ, ಜಾಂಗ್ ಯೂಕ್ಸಿಯಾ ಮತ್ತು ಲಿಯು ಝೆನ್ಲಿ ವಿರುದ್ಧ ತನಿಖೆ ಪ್ರಾರಂಭಿಸಲು ನಿರ್ಧರಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಜಾಗ್, ಸೇನೆಯ ಉನ್ನತ ಶ್ರೇಣಿಯ ಅಧಿಕಾರಿಯಾಗಿದ್ದು, ಅವರು ಚೀನಾ ಸೇನಾ ಘಟಕದಿಂದ ಶೋಕಾಸ್ ನೋಟಿಸ್ ನೀಡಲಾಗಿದೆ. ಜೊತೆಗೆ ಜಾಗ್ 24 ಮೆನ್ ಪಾಲಿಟ್ಬ್ಯೂರೋ ಸದಸ್ಯರಾಗುದ್ದಾರೆ. 2012ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಕ್ಸಿ ಅವರು ನಡೆಸುತ್ತಿರುವ ಭ್ರಷ್ಟಾಚಾರ ವಿರೋಧಿ ಅಭಿಯಾನದ ಅಡಿ ಈಗಾಗಲೇ ಹಲವು ಹಿರಿಯ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಅಧಿಕಾರಿಗಳನ್ನು ವಜಾ ಅಥವಾ ಶಿಕ್ಷೆಗೆ ಒಳಪಡಿಸಲಾಗಿದೆ.
ಕಳೆದ ತಿಂಗಳು ಸಿಎಂಸಿಯ ರಾಜಕೀಯ ಮತ್ತು ಕಾನೂನು ವ್ಯವಹಾರಗಳ ಸಮಿತಿಯ ಮುಖ್ಯಸ್ಥ ವಾಂಗ್ ರೆನ್ಹುವಾ ಹಾಗೂ ಪೀಪಲ್ಸ್ ಸಶಸ್ತ್ರ ಪೊಲೀಸ್ ರಾಜಕೀಯ ಆಯುಕ್ತ ಜಾಂಗ್ ಹಾಂಗ್‌ಬಿಂಗ್ ಮತ್ತು ಸಿಎಂಸಿ ತರಬೇತಿ ವಿಭಾಗದ ನಿರ್ದೇಶಕ ವಾಂಗ್ ಪೆಂಗ್ ಅವರನ್ನು ಹೊರಹಾಕಿತು.
ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕ ಮಾವೋ ಝೆಡಾಂಗ್ ನಂತರ ಎರಡು ಅವಧಿಗಿಂತ ಹೆಚ್ಚು ಕಾಲ ಅಧಿಕಾರದಲ್ಲಿ ಉಳಿದ ಏಕೈಕ ಚೀನೀ ನಾಯಕ ಕ್ಸಿ ಆಗಿದ್ದು, ಅವರು ಸದ್ಯ ದೇಶದಲ್ಲಿ ಮೂರನೇ ಅವಧಿಗೆ ಅಧ್ಯಕ್ಷರಾಗಿದ್ದಾರೆ. ಅವರು ಟೈಗರ್ ಅಂಡ್ ಫೈಲ್ಸ್ ವಿರುದ್ಧ ಭ್ರಷ್ಟಾಚಾರ ವಿರೋಧಿ ಅಭಿಯಾನ ನಡೆಸುತ್ತಿದ್ದಾರೆ.ಈ ಭ್ರಷ್ಟಾಚಾರ ವಿರೋಧಿ ಅಭಿಯಾನದಲ್ಲಿ ಈಗಾಗಲೇ ಲಕ್ಷಾಂತರ ಜನ ಅಧಿಕಾರಿಗಳನ್ನು ಶಿಕ್ಷಿಸಲಾಗಿದ್ದು, ಇದರಲ್ಲಿ ಹಲವು ಮಂದಿ ಉನ್ನತ ಮಟ್ಟದ ಸೇನಾ ಅಧಿಕಾರಿಗಳು ಶಿಕ್ಷೆಗೆ ಒಳಪಟ್ಟಿದ್ದಾರೆ.
